Saturday, October 1, 2022
spot_img
Homeಸಿನೆಮಾವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ

ವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ

ಮುಂಬಯಿ, ಜು. 26 :ಬಾಲಿವುಡ್‌ ಕಂಡ ಅತ್ಯತ್ತಮ ನಟಿಯರ ಪೈಕಿ  ವಿದ್ಯಾ ಬಾಲನ್‌ ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲ. ಗ್ಲಾಮರ್‌ ಗಿಂತಲೂ ಹೆಚ್ಚಾಗಿ ಚಾರಿತ್ರಿಕ ಮತ್ತು ಥೀಮ್‌ ಬೇಸ್ಡ್‌ ಪಾತ್ರಗಳಲ್ಲಿ ವಿದ್ಯಾ ಹೆಚ್ಚು ಗುರುತಿಸಿಕೊಂಡಿದ್ದಾರೆ.ಡರ್ಟಿ ಪಿಕ್ಚರ್‌, ಮಿಶನ್‌ ಮಂಗಲ್‌ ಇತ್ಯಾದಿ ಚಿತ್ರಗಳು ವಿದ್ಯಾ ಬಾಲನ್‌ ಪ್ರತಿಭೆಗೆ ಸಾಕ್ಷಿ. ನಡೆದಾಡುವ ಕಂಪ್ಯೂಟರ್‌ ಎಂದೇ ಖ್ಯಾತರಾಗಿದ್ದ ಶಕುಂತಳಾ ದೇವಿಯವರ ಬದುಕಿನ ಕುರಿತಾದ ಚಿತ್ರದಲ್ಲಿ ಶಕುಂತಳಾ ದೇವಿಯಾಗಿ ವಿದ್ಯಾ ನಟಿಸಿದ್ದು ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.ಈ ನಡುವೆ ವಿದ್ಯ ಇನ್ನೋರ್ವ ಮಹಾನ್‌ ಮಹಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.ಅವರು ಬೇರೆ ಯಾರೂ ಅಲ್ಲ ಇಂದಿರಾ ಗಾಂಧಿ.

ವಿದ್ಯಾ ಬಾಲನ್ ಗೆ ಈ  ಅಪ್ರತಿಮ ಪಾತ್ರದಲ್ಲಿ ಅಭಿನಯಿಸಬೇಕು ಎಂಬುದು ಬಹುಕಾಲದ ಕನಸು. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಯಿ ಬಿಟ್ಟಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ತಮ್ಮ ಚಿರಕಾಲದ ಆಸೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

ಯಾರಾದರೂ ಉಕ್ಕಿನ ಮಹಿಳೆ ಎಂದೇ ಹೆಸರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನ ಆಧಾರಿತ ಚಿತ್ರ ಮಾಡಿದರೆ, ಅದರಲ್ಲಿ ಮಾಜಿ ಪ್ರಧಾನಿಯ ಪಾತ್ರ ನಿರ್ವಹಿಸಬೇಕು ಎಂಬ ಆಸೆಯಿದೆ. ಅಂತಹ ದೊಡ್ಡ ಪಾತ್ರ ನಿರ್ವಹಿಸುವುದು ಸಾಮಾನ್ಯ ವಿಷಯವಲ್ಲ. ಹಾಗಾಗಿ ಆ ಪಾತ್ರ ನನ್ನ ಜೀವನದ ಕನಸು. ಆ ಕನಸು ಒಂದು ದಿನ ನನಸಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. 

ಇಂದಿರಾ ಗಾಂಧಿ ಮಹಿಳಾ ಶಕ್ತಿಗೆ ಪ್ರತಿರೂಪವಾಗಿದ್ದರು. ಹೀಗಾಗಿ ಅವರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

ಇಂದಿರಾ ಗಾಂಧಿಯ ಬಗ್ಗೆ ಈ ಹಿಂದೆಯೂ ಸಿನೆಮಾ ತಯಾರಿಸುವ ಪ್ರಯತ್ನಗಳಾಗಿದ್ದವು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಇಂದಿರಾ ಗಾಂಧಿಯ ನೈಜ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಚಿತ್ರ ಮಾತ್ರ ಇನ್ನೂ ಬಂದಿಲ್ಲ.

LEAVE A REPLY

Please enter your comment!
Please enter your name here

Most Popular

error: Content is protected !!