ಅಂಚೆ ಇಲಾಖೆಯಿಂದ ಆನ್‌ಲೈನ್‌ ರಾಖಿ ಸೇವೆ

0

ಬೆಂಗಳೂರು,ಜು.26 :ಕೊರೊನಾ ವೈರಸ್‌ ಈ ಸಲ ಎಲ್ಲ ಹಬ್ಬಗಳನ್ನು ಕಾಡಲಿದೆ.ನಾಗರಪಂಚಮಿ, ಬಕ್ರೀದ್‌ ಬಳಿಕ ಈಗ ಇನ್ನೊಂದು ಜನಪ್ರಿಯ ಹಬ್ಬವಾದ ರಾಖಿ ಬಂಧನಕ್ಕೂ ಕೊರೊನಾ ಅಡ್ಡಗಾಲು ಹಾಕುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆ  ಮಹಿಳೆಯರಿಗಾಗಿ ಆನ್ ಲೈನ್ ರಾಕಿ ಪೋಸ್ಟ್ ಆರಂಭಿಸಿದೆ.

ರಕ್ಷಾ ಬಂಧನ ಹಬ್ಬದಲ್ಲಿ ಜನರು ಗುಂಪುಕೂತುವ ಪ್ರಮೇಯ ಬರುವುದಿಲ್ಲ.ಇದು ಮನೆಯಲ್ಲೇ ಆಚರಿಸಿಕೊಳ್ಳುವ ಹಬ್ಬ.ಆದರೂ ಸಃಓದರ ಅಥವಾ ಸಹೋದರಿಯನ್ನು ಭೇಟಿ ಮಾಡುವ ಸಲುವಾಗಿ ಜನರು ಪ್ರಯಾಣಿಸಬೇಕಾಗುತ್ತದೆ.ಇದರಿಂದ ವೈರಸ್‌ ಹರದುವ ಸಾಧ್ಯತೆ ಇರುವುದರಿಂದ ಅಂಚೆ ಇಲಾಖೆ ಆನ್ಲೈನ್‌ ಸೇವೆ ಒದಗಿಸಲು ಮುಂದಾಗಿದೆ.

ಆಗಸ್ಟ್ 3ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುವುದು. ಇದಕ್ಕಾಗಿ ಅಂಚೆ ಇಲಾಖೆ ಆನ್ ಲೈನ್ ಮೂಲಕ ರಾಖಿ ಖರೀದಿ ಮತ್ತು ರವಾನೆ ಸೇವೆಯನ್ನು ಆರಂಭಿಸಿದೆ.

ಅಂಚೆ ಇಲಾಖೆಯ ವೆಬ್ ಸೈಟ್ ನಲ್ಲಿ ನಿಮಗೆ ಇಷ್ಟವಾದ ರಾಖಿಯನ್ನು ಆಯ್ಕೆ ಮಾಡಿ, ಅದಕ್ಕೆ ಆನ್ ಲೈನ್ ಮೂಲಕವೇ ಹಣ ಪಾವತಿಸಿ, ಮನೆಯ ವಿಳಾಸ ನೀಡಿದೆ ಹಬ್ಬದಂದು ರಾಖಿ ಮನೆ ತಲುಪುತ್ತದೆ. ಅಲ್ಲದೆ ನೀವು ಮನೆಯಲ್ಲಿದ್ದುಕೊಂಡೇ ಲಡಾಖ್ ಗಡಿಯಲ್ಲಿರುವ ವೀರ ಯೋಧರಿಗೂ ಸಹ ಅಂಚೆ ಮೂಲಕ ರಾಖಿ ರವಾನಿಸಬಹುದು. 

Previous articleಬಕ್ರೀದ್‌ ಸಾಮೂಹಿಕ ಪ್ರಾರ್ಥನೆಗೆ ಅನುಮತಿಯಿಲ್ಲ
Next articleವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ

LEAVE A REPLY

Please enter your comment!
Please enter your name here