ಸಾಮಾನ್ಯ ರೈಲು ಸಂಚಾರ ಸದ್ಯಕ್ಕಿಲ್ಲ

ದಿಲ್ಲಿ : ಕೊರೊನಾ ವೈರಸ್ ಸೋಂಕಿನ ಪ್ರಸರಣವನ್ನು ಮತಡೆಯಲು ರದ್ದುಪಡಿಸಲಾಗಿರುವ ರೈಲುಗಳು ಯಾವಾಗ ಪ್ರಾರಂಝವಾಗಲಿದೆ? ಈ ಪ್ರಶ್ನೆಯೀಗ ಎಲ್ಲರನ್ನು ಕಾಡುತ್ತಿದೆ.ಈ ಕುರಿತು  ಭಾರತೀಯ ರೈಲ್ವೇಯೇ ಸ್ಪಷ್ಟಜೆ ಜೀಡಿದೆ. ಪ್ರಯಾಣಿಕರ ರೈಲುಗಳ  ಸಂಚಾರ ಪುನರಾರಂಭಿಸುವ ಬಗ್ಗೆ ಇನ್ನೂ  ತೀರ್ಮಾನ ಕೈಗೊಂಡಿಲ್ಲ ಎಂದು ರೈಲ್ವೆ ಹೇಳಿದೆ.

ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಎಲ್ಲ ರಾಜ್ಯಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಯಾವುದೇ ರಾಜ್ಯ ಹೆಚ್ಚಿನ ರೈಲಿಗೆ ಬೇಡಿಕೆ ಸಲ್ಲಿಸಿದರೆ ನಾವು ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಸ್ತುತ 230 ವಿಶೇಷ ಪ್ರಯಾಣಿಕ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಇವುಗಳಲ್ಲಿ ಶೇ 75.48ರಷ್ಟು ಜನರು ಸಂಚಾರ ನಡೆಸುತ್ತಿದ್ದಾರೆ. ಸುಮಾರು 68 ರೈಲುಗಳು ಮಾತ್ರ ಶೇ. 100ರಷ್ಟು ಭರ್ತಿಯಾಗುತ್ತಿವೆ.

ಈಗ ಸಂಚಾರ ನಡೆಸುತ್ತಿರುವ 37 ರೈಲುಗಳಲ್ಲಿ ಕೇವಲ ಶೇ 30ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಹಲವು ರೈಲುಗಳಲ್ಲಿ ಖಾಲಿ ಸೀಟುಗಳು ಕಾಣಿಸುತ್ತಿವೆ.

ಜನರಿಗೆ ಉಪಯೋಗವಾಗಲಿ ಎಂದು ರೈಲನ್ನು ಓಡಿಸಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ.ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿಯೇ ಈ ವರ್ಷ ರೈಲುಗಳ ವೇಳಾಪಟ್ಟಿ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.

ಹೆಚ್ಚು ಜನರನ್ನು ಆಕರ್ಷಿಸಲು ವೇಳಾಪಟ್ಟಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ವಿ.ಕೆ.ಯಾದವ್ ತಿಳಿಸಿದ್ದಾರೆ.ಭಾರತೀಯ ರೈಲ್ವೆ ಮೇ 1 ರಿಂದ 4615 ಶ್ರಮಿಕ್ ಎಕ್ಸ್‍ಪ್ರೆಸ್ ರೈಲುಗಳನ್ನು ಓಡಿಸಿದೆ.

ಈಗಲೂ ರಾಜ್ಯಗಳು ಬೇಡಿಕೆ ಸಲ್ಲಿಸಿದಲ್ಲಿ ಶ್ರಮಿಕ್ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಯಾದವ್ ವಿವರಣೆ ನೀಡಿದರು. ರೈಲ್ವೆ 813 ಕೋವಿಡ್ ಆರೈಕೆ ಕೇಂದ್ರಗಳನ್ನು ಇದುವರೆಗೂ ನೀಡಿದೆ. ವಿವಿಧ ರಾಜ್ಯಗಳ ಬೇಡಿಕೆಯಂತೆ ನೀಡಲಾಗಿದ್ದು, ಇವುಗಳು ಒಟ್ಟು 12,712 ಹಾಸಿಗೆ ಸಾಮರ್ಥ್ಯವನ್ನು ಹೊಂದಿವೆ.

Latest Articles

error: Content is protected !!