ಜೈಪುರ:ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಲು ಮುಂದಾಗಿದ್ದರು ಎಂಬ ಆರೋಪಕ್ಕೆ ಪುಷ್ಠಿ ನೀಡುವ ಆಡಿಯೊ ಕ್ಲಿಪ್ ವೈರಲ್ ಆದ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ (ಎಸ್ಒಜಿ) ಸಂಜಯ್ ಜೈನ್ ಅವರನ್ನು ಬಂಧಿಸಿದೆ.
ಆಡಿಯೊ ಕ್ಲಿಪ್ ಆಧಾರದ ಮೇಲೆ ಕಾಂಗ್ರೆಸ್ ನಿನ್ನೆ ದಾಖಲಿಸಿದ್ದ ಎಫ್ಐಆರ್ ಗೆ ಸಂಬಂಧಿಸಿ ಸಂಜಯ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಶೋಕ್ ರಾಥೋಡ್ ತಿಳಿಸಿದ್ದಾರೆ.
ಸಂಜಯ್ ಜೈನ್ ಅವರನ್ನು ಬಂಧಿಸುವ ಮುನ್ನ ನಿನ್ನೆ ಮತ್ತು ಮೊನ್ನೆ ವಿಚಾರಣೆ ನಡೆಸಲಾಗಿತ್ತು.