ವಡೋದರ :ಕೊರೊನಾ ಸೋಂಕಿಗೆ ತುತ್ತಾಗುವ ಭೀತಿಯಲ್ಲಿ ವೈದ್ಯರು ಮತ್ತು ನರ್ಸ್ ಗಳು ಕೊರೊನಾ ರೋಗೊಗಳಿಗೆ ಚಿಕಿತ್ಸೆ ನೀಡಲು ಹಿಂದೇಟನ ಹಾಕುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿರಯತ್ತದೆ. ಇದಕ್ಕೆ ಪರಿಹಾರ ಎಂಬಂತೆ ಗುಜರಾತಿನ ವಡೋದರದ ಸರ್ ಸಯಾಜಿರಾವ್ ಗಾಯಕ್‌ವಾಡ್ ಆಸ್ಯತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಔಷಧ ಮತ್ತು ಆಹಾರ ಪೂರೈಸಲು ಎರಡು ರೋಬೋಟ್ ಗಳನ್ನು ನಿಯೋಜಿಸಲಾಗಿದೆ. ಕೊರೊನಾ ವಾರ್ಡ್ ಗಳಲ್ಲಿ ರೋಗಿಗಳನ್ನು ಸ್ಕ್ರೀನಿಂಗ್ ಮಾಡುವ ಕೆಲಸವನ್ನೂ ಈ ರೋಬೋಟ್‌ಗಳೇ ಮಾಡುತ್ತಿವೆ.
ಸದ್ಯದಲ್ಲೇ ಇನ್ನೊಂದು ರೋಬೋಟ್ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಜನರ ಥರ್ಮಲ್ ಸ್ಕ್ರೀನಿಂಗ್ಗಾಗಿ ನಿಯೋಜನೆಗೊಳ್ಳಲಿದೆ. ಸವು ದೇಶೀಯವಾಗಿ ತಯಾರಾಗಿರುವ ರೋಬೋಟ್‌ಗಳು. ಅವುಗಳ ನಿರ್ವಹಣೆಗೆ ವಿಶೇಷ ತಾಂತ್ರಿಕ ಜ್ಞಾನದ ಅಗತ್ಯವೂ ಇಲ್ಲ. ಕ್ಲಬ್ ಫಸ್ಟ್ ಟೆಕ್ನಲಾಜಿ ಎಂಬ ಕಂಪನಿ ಆಸ್ಪೊತ್ರೆಗೆ ಈ ರೋಬೋಟ್ ಗಳನ್ನು ತಯಾರಿಸಿಕೊಟ್ಟಿದೆ. ಸ್ಯಾನಿಟೈಸೇಶನ್ ಸೇರಿದಂತೆ ಎಲ್ಲ ಕೆಲಸವನ್ನೂ ರೋಬೋಟ್‌ಗಳು ಮಾಡುತ್ತವೆ.