ಜೈಪುರ : ಸಚಿನ್ ಪೈಲಟ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಂಡಾಯ ಶಾಸಕರನ್ನು ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜಸ್ಥಾನದ ವಿಶೇಷ ಪೊಲೀಸ್ ಪಡೆ ಬಂಡಾಯ ಶಾಸಕರಿದ್ದ ಹರ್ಯಾಣದ ರೆಸಾರ್ಟ್‌ಗೆ ಹೋದಾಗ ಅಲ್ಲಿ ಸರಕಾರವನ್ನು ಪತನಗೊಳಿಸುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ರೆಸಾರ್ಟ್‌ನಲ್ಲಿರುವ ಶಾಸಕರನ್ನು ಹೊರಗೆ ಸಾಗಿಸುವ ತನಕ ಹರ್ಯಾಣದ ಪೊಲೀಸರು ರಾಜಸ್ಥಾನದ ಪೊಲೀಸರಿಗೆ ರೆಸಾರ್ಟ್ ನೊಳಗೆ ಹೋಗಲು ಬಿಡಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಗೋವಿಂದ್ ಸಿಂಗ್ ಡೋತಸರ ಆರೋಪಿಸಿದ್ದಾರೆ.