ಮುಂಬಯಿ: ಕೊರೊನಾ ದೃಢಪಟ್ಟ ಬಳಿಕ ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಿವುಡ್ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚದಚನ್ ಹಾಗೂ ಅವರ ಮಗಳು ಆರಾಧ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಯಮಿತ ತಪಾಸಣೆಗಾಗಿ ಅವರನ್ನು ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಐಶ್ವರ್ಯಾ ರೈ ಬಚ್ಚನ್ ಅವರ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಾವ ಅಮಿತಾಬ್ ಬಚ್ಚನ್ ಕೂಡಾ ನಾನಾವತಿ ಆಲ್ಯತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವಾರ ಬಾಲಿವುಡ್‌ನ ಬಿಗ್ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಬ್ ಗೆ ಕೊರೊನಾ ಸೋಂಕು ತಗಲಿದೆ ಎಂದು ತಿಳಿದಾಗ ಇಡೀ ದೇಶ ಮರುಗಿತ್ತು. ಜಯಾ ಬಚ್ಚನ್ ಹೊರತುಪಡಿಸಿ ಇಡೀ ಬಚ್ಚನ್ ಕುಟುಂಬ ಕೊರೊನಾ ಸೋಂಕಿಗೆ ತುತ್ತಾಗಿದೆ. ಜನರು ಬಚ್ಚನ್ ಕುಟುಂಬಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಅಭಿಮಾನಿಗಳ ಅಪಾರ ಅಕ್ಕರೆ-ಪ್ರೀತಿಯನ್ನು ಕಂಡ ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೊಂದಿಗೆ ಸಂಪರ್ಕದಲ್ಲಿರಲು ನಿರ್ಧರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಬರೆಯುವ ಮೂಲಕ ಅವರು ನಿರಂತರವಾಗಿ ಜನರಿಗೆ ಧೈರ್ಯದ ಉದಾಹರಣೆಗಳನ್ನುನೀಡುತ್ತಿದ್ದಾರೆ.