ಜು.21ರಿಂದ ಅಮರನಾಥ ಯಾತ್ರೆ : ಉಗ್ರ ಭೀತಿ ಹಿನ್ನೆಲೆಯಲ್ಲಿ ಬಿಗು ಕಾವಲು

ದಿಲ್ಲಿ:  ಜುಲೈ 21 ರಿಂದ ಪವಿತ್ರ ಅಮರನಾಥ  ಯಾತ್ರೆ ಆರಂಭವಾಗಲಿದೆ. ಆದರೆ ಈ ವರ್ಷವೂ ಅಮರನಾಥ  ಯಾತ್ರೆ ಊಗ್ರ ಭೀತಿಯಿಂದ ಮುಕ್ತವಾಗಿಲ್ಲ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಸೇನೆ ನಿರಂತರವಾಗಿ ಉಗ್ರ ಬೇಟೆ ನಡೆಸುತ್ತಿದ್ದರೂ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡುವ ಸಾಧ್ತೆ ಇದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.  

ಭಯೋತ್ಪಾದನೆ ವಿರುದ್ಧ ಸೇನೆಯ ಕಾರ್ಯಾಚರಣೆಯಿಂದ ವ್ಯಗ್ರರಾಗಿರುವ  ಉಗ್ರರು ಅಮರನಾಥ ಯಾತ್ರೆಯನ್ನು ಗುರಿಯಾಗಿಸಬಹುದು. ಕಾಶ್ಮೀರದ ಹೆದ್ದಾರಿ ಸಂಖ್ಯೆ 44 ರಲ್ಲಿ ಅಮರನಾಥ ಯಾತ್ರೆ ಮೇಲೆ ಭಯೋತ್ಪಾದಕರು ದಾಳಿ ನಡೆಸಬಹುದು ಎಂದು ಗುಪ್ರಚರ ಮೂಲಗಳು ಎಚ್ಚರಿಸಿವೆ. ಆದರೆ  ಭಯೋತ್ಪಾದಕರ ದುಷ್ಕೃತ್ಯವನ್ನು ವಫಲಗೊಳಿಸಲು ಸೇನೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.  ಸೈನ್ಯ ಮತ್ತು ಭದ್ರತಾ ಪಡೆಗಳು ಸದಾ ಕಟ್ಟೆಚ್ಚರದ ಸ್ಥಿತಿಯಲ್ಲಿವೆ. . 2019ರಲ್ಲಿ ಕೂಡ  ಭಯೋತ್ಪಾದಕರು ಅಮರನಾಥ ಯಾತ್ರೆ  ಮೇಲೆ ದಾಳಿ ನಡೆಸಲು ಸಂಚು ಹೂಡಿದ್ದರು. ಆದರೆ ಸೇನೆಯ ಕಟ್ಟೆಚ್ಚರದಿಂದಾಗಿ ಸಾಧ್ಯವಾಗಿರಲಿಲ್ಲ.ಅಲ್ಲದೆ 370ನೇ ವಿಧಿಯನ್ನು ರದ್ದುಗೊಳಿಸುವ ಲಿನವಾಗಿ ಅಮರನಾಥ  ಯಾತ್ರೆಯನ್ನು  ಮೊಟಕುಗೊಳಿಸಲಾಗಿತ್ತು. ಈ ಬಾರಿ ಜುಲೈ 21 ರಿಂದ ಆಗಸ್ಟ್ 03 ರವರೆಗೆ ಪ್ರಯಾಣ ನಡೆಯಲಿದೆ.

ನಿತ್ಯ  500 ಯಾತ್ರಾರ್ಥಿಗಳಿಗೆ ಅವಕಾಶ
ಕೊರೊನಾ ವೈರಸ್‌ ಹರಡುವ ಭಿತಿಯಿರುವ ಕಾರಣ ಈ ವರ್ಷ ನಿತ್ಯ  ಕೇವಲ 500 ಯಾತ್ರಾರ್ಥಿಗಳಿಗೆ ಮಾತ್ರ ಶಿವನ ಪವಿತ್ರ ಗುಹೆಯನ್ನು ಭೇಟಿ ಮಾಡಲು ಅವಕಾಶವಿರುತ್ತದೆ. 55 ವರ್ಷದೊಳಗಿನ ಜನರಿಗೆ ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತದೆ. ಪ್ರಯಾಣದ ಸಮಯದಲ್ಲಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾರ್ಗಸೂಚಿಗಳು ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಪ್ರತಿವರ್ಷವೂ ಅಮರನಾಥ  ಯಾತ್ರೆಗೆ ಉಗ್ರರ ಬೆದರಿಕೆಯೇ ಸರಕಾರದ ಪಾಲಿಗೆ ದೊಡ್ಡ ತಲೆನೋವಿನ ಸಂಗತಿ. ನಾಲ್ಕು ದಿನಗಳ ಹಿಂದೆಯಷ್ಟೇ  ದಕ್ಷಿಣ ಕಾಶ್ಮೀರದ ಕುಲ್ಗಾಂವ್‌ ನಲ್ಲಿ  ಮೂವರು ಉಗ್ರರನ್ನು ಕೊಲ್ಲಲಾಗಿದೆ. ಆದರೂ ಯಾತ್ರೆ ಉಗ್ರ ಭೀತಿಯಿಂದ ಪೂರ್ಣ  ಮುಕ್ತವಾಗಿಲ್ಲ. ದಕ್ಷಿಣ ಕಾಶ್ಮೀರದಲ್ಲಿ ಎರಡು ವಲಯದ ಕಮಾಂಡರ್ ಬ್ರಿಗೇಡಿಯರ್ ವಿವೇಕ್ ಸಿಂಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಮರನಾಥ ಯಾತ್ರೆಯನ್ನು ಗುರಿಯಾಗಿಸಲು ಭಯೋತ್ಪಾದಕರು ಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೇ ಕಾರಣಕ್ಕೂ ಉಗ್ರರ ಈ ಯತ್ನ ಸಫಲವಾಗಲು ಬಿಡುವುದಿಲ್ಲ. ಯಾತ್ರಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 44 ರ ಒಂದು ಭಾಗವನ್ನು ಪ್ರಯಾಣಿಕರು ಬಳಸುತ್ತಾರೆ. ಈ ಭಾಗವು ಸ್ವಲ್ಪ ಸೂಕ್ಷ್ಮವಾಗಿರುತ್ತದೆ. ಪ್ರವಾಸಿಗರು ಸೋನಮಾರ್ಗ್ (ಗ್ಯಾಂಡರ್‌ಬಲ್) ತಲುಪಲು ಈ ಮಾರ್ಗವನ್ನು ಬಳಸುತ್ತಾರೆ ಮತ್ತು ಇದು (ಬಾಲ್ಟಾಲ್) ಏಕೈಕ ಮಾರ್ಗವಾಗಿದೆ, ಇದು ಅಮರನಾಥ ಗುಹೆಗೆ ಮುಂದುವರಿಯುತ್ತದೆ.  ಅಮರನಾಥ ಯಾತ್ರೆಯನ್ನು ಯಾವುದೇ ತೊಂದರೆಯಿಲ್ಲದೆ ಶಾಂತಿಯುತವಾಗಿ ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಮತ್ತು ಭದ್ರತಾ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ ಎಂದು ಬ್ರಿಗೇಡಿಯರ್ ಠಾಕೂರ್ಭರವಲೆ ನೀಡಿದಾರೆ.   

error: Content is protected !!
Scroll to Top