ಕೊರೊನಾ ವೈರಸ್ ನ 11 ಹೊಸ ರೋಗಲಕ್ಷಣಗಳು

0

ದಿಲ್ಲಿ : ಕೊರೊನಾ ವೈರಸ್‌ ವ್ಯದ್ಯರನ್ನು ಏಮಾರಿಸಿದಷ್ಟು ಬೇರೆ ಯಾವ ವೈರಸ್‌ ಏಮಾರಿಸಿರಲಿಕ್ಕಿಲ್ಲ. ಈ ವೈರಸ್‌ ಗೆ ನಿರ್ದಿಷ್ಟವಾದ ರೋಗ ಲಕ್ಷಣ ಎಂಬುದೇ ಇಲ್ಲ. ಆಗಾಗ ತನ್ನ ಲಕ್ಷಣಗಳನ್ನು ಬದಲಾಯಿಸುತ್ತಿರುವ ಇದು ವೈದ್ಯ ಲೋಕಕ್ಕೆ ಒಂದು  ಸವಾಲೇ ಆಗಿದೆ. ಇದರ ಲಕ್ಷಣಗಳು ನಿರಂತರವಾಗಿ ಬದಲಾಗುತ್ತಿವೆ. ಹೊಸ ಲಕ್ಷಣಗಳು ಕಂಡುಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ವೈರಸ್‌ನ ಹೊಸ 11 ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದೆ.

ಆರಂಭದಲ್ಲಿ ಪತ್ತೆಯಾದ 4 ಲಕ್ಷಣಗಳು

 ತುಂಬಾ ಜ್ವರ
 ಒಣ ಕೆಮ್ಮು
 ಗಂಟಲು ಕೆರತ
-ಉಸಿರಾಟದಲ್ಲಿ ತೊಂದರೆ

ಅನಂತರ ವೈರಸ್‌  ಹೆಚ್ಚಾಗಿ ಹರಡುತ್ತಿದ್ದಂತೆ, ಹೊಸ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾದ 11 ಹೊಸ ಲಕ್ಷಣಗಳನ್ನು ಬಹಿರಂಗಪಡಿಸಿದೆ. ಮೊದಲ 4 ರೋಗ ಲಕ್ಷಣಗಳೊಂದಿಗೆ, ಈಗ ಈ ಲಕ್ಷಣಗಳು ಕೊರೊನಾದಿಂದ ಬಳಲುತ್ತಿರುವ ರೋಗಿಗಳಲ್ಲಿಯೂ ಕಂಡುಬರುತ್ತವೆ.
 ತೀವ್ರ ದೇಹದ ನೋವು
ನಿರಂತರ ತಲೆನೋವು
 ತುಂಬಾ ಶೀತದಿಂದ ಮೈ ನಡುಕ
ವಾಕರಿಕೆ
ವಾಂತಿ
-ಹೊಟ್ಟೆಯಲ್ಲಿ ಸಂಕಟ, ಅತಿಸಾರ
 ಕೆಮ್ಮುವ ಸಮಯದಲ್ಲಿ ಲೋಳೆಯಂತೆ  ರಕ್ತಸ್ರಾವ

ಈ ಮೊದಲು ವಿಶ್ವ ಆರೋಗ್ಯ ಸಂಸ್ಥೆ  ವಾಸನೆ ತಿಳಿಯದಿರುವುದು ಮತ್ತು ರುಚಿ ಗೊತ್ತಾಗದಿರುವುದೂ ಸಹ ಕೊರೊನಾದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಿತ್ತು. ಡಬ್ಲ್ಯುಎಚ್‌ಒ ಸೇರಿದಂತೆ ವಿಶ್ವದಾದ್ಯಂತದ ವಿಜ್ಞಾನಿಗಳು, ಸಂಶೋಧಕರು ಮತ್ತು ವೈದ್ಯರು ಕೊರೊನಾ ವೈರಸ್‌ನ ಇತರ ರೋಗ ಲಕ್ಷಣಗಳನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ತೊಡಗಿದ್ದಾರೆ. ಕೊರೊನಾ ವೈರಸ್‌ನ ರೂಪಾಂತರವು ವಿಜ್ಞಾನಿಗಳು ಮತ್ತು ವೈದ್ಯರಿಗೆ ಒಂದು ಸವಾಲಾಗಿದೆ.

ಕೇಂದ್ರ ಆರೋಗ್ಯ ಲಚಿವಾಲಯ ಸೂಚಿಸಿರುವ ಮುನ್ನೆಚ್ಚೆರಿಕೆ ಕ್ರಮಗಳು
*ಯಾವುದೇ ವ್ಯಕ್ತಿಯನ್ನು ಭೇಟಿ ಆದಾಗ ಅವರನ್ನು ದೂರದಿಂದಲೇ ಮಾತನಾಡಿಸಿ.
* ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಕನಿಷ್ಠ 6 ಅಡಿ ದೂರವಿರಬೇಕು.
-*ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಕೈಗಳಿಂದ ಮುಟ್ಟಬೇಡಿ.
* ಆಗಾಗ್ಗೆ ಸೋಪಿನಿಂದ ಕೈ ತೊಳೆಯಿರಿ.
*ತಂಬಾಕು, ಸಿಗರೇಟ್, ಆಲ್ಕೋಹಾಲ್ ಮುಂತಾದವುಗಳನ್ನು ಸೇವಿಸುವುದನ್ನು ತಪ್ಪಿಸಿ.
* ಯಾವುದೇ ಸ್ಥಳವನ್ನು ಮುಟ್ಟುವ ಮೊದಲು ಅದನ್ನು ಸ್ವಚ್ಛಗೊಳಿಸಿ.
*ಅಗತ್ಯವಿದ್ದಾಗ ಮಾತ್ರ ಪ್ರವಾಸ ಮಾಡಿ.
* ಜನಸಂದಣಿ ಇರುವ ಸ್ಥಳಕ್ಕೆ ಹೋಗಬೇಡಿ.
* ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ
* ನಿಮ್ಮ ಫೋನ್‌ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಅದನ್ನು ಯಾವಾಗಲೂ ಸಕ್ರಿಯವಾಗಿಡಿ.
* ಈ ವೈರಸ್‌ನ ಹಿಡಿತಕ್ಕೆ ಬಂದ ಜನರ ವಿರುದ್ಧ ತಾರತಮ್ಯ ಮಾಡಬೇಡಿ.
* ಯಾವುದೇ ಮಾಹಿತಿ ಅಥವಾ ಮಾತುಕತೆ ಇಲ್ಲದೆ ಒಬ್ಬರನ್ನು ಭೇಟಿಯಾಗುವುದನ್ನು ತಪ್ಪಿಸಿ.
* ಯಾವುದೇ ರೀತಿಯ ರೋಗ ಲಕ್ಷಣ ಕಂಡುಬಂದರೆ, ಟೋಲ್ ಫ್ರೀ ಸಹಾಯವಾಣಿ 1075 ಅಥವಾ ಕೇಂದ್ರ ಸರ್ಕಾರ ನೀಡಿದ ರಾಜ್ಯ ಸಹಾಯವಾಣಿಗೆ ಕರೆ ಮಾಡಿ ಮತ್ತು ವೈರಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ.
* ಮಾನಸಿಕ ಒತ್ತಡ ಅಥವಾ ತೊಂದರೆಯಿಂದ ಬಳಲುತ್ತಿರುವ ಜನರಿಗೆ ಮಾನಸಿಕ ಸ್ಥೈರ್ಯ ತುಂಬಲು ಸಹಾಯಮಾಡಿ.

Previous articleನಮ್ಮ ಒಂದೇ ಒಂದು ಇಂಚು ಜಾಗ ಕಬಳಿಸಲು ಬಿಡುವುದಿಲ್ಲ – ಲಡಾಕ್‌ ನಲ್ಲಿ ರಾಜನಾಥ್ ಸಿಂಗ್ ಎಚ್ಚರಿಕೆ
Next articleಜು.21ರಿಂದ ಅಮರನಾಥ ಯಾತ್ರೆ : ಉಗ್ರ ಭೀತಿ ಹಿನ್ನೆಲೆಯಲ್ಲಿ ಬಿಗು ಕಾವಲು

LEAVE A REPLY

Please enter your comment!
Please enter your name here