ಕೊರೊನಾ ವೈರಸ್ ಗೆ ಆಯುರ್ವೇದ ಮದ್ದರೆದ ಡಾ. ಗಿರಿಧರ ಕಜೆ

-ರಾಜೇಂದ್ರ ಭಟ್ ಕೆ.

       ಇಡೀ ಜಗತ್ತು ಇಂದು ಕೊರೊನಾ ಎಂಬ  ಮಹಾಮಾರಿಗೆ ಭಯಭೀತವಾಗಿರುವ ಈ ಸಂದರ್ಭದಲ್ಲಿ “ಯಾರಾದರೂ ಅದಕ್ಕೊಂದು ಲಸಿಕೆ ಕಂಡು ಹುಡುಕಲಿ ದೇವರೇ” ಎಂದು ಎಲ್ಲರೂ  ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವೈರಸ್ ಕಾಯಿಲೆಯೂ ಜಗತ್ತನ್ನು ಇಷ್ಟೊಂದು ಕಾಡಿದ್ದೇ ಇಲ್ಲ.

        ಈಗ ಕರಾವಳಿ ಕರ್ನಾಟಕ  ಮೂಲದ ಆಯುರ್ವೇದಿಕ್ ವೈದ್ಯರೊಬ್ಬರು ತಾವೇ  ಸಂಶೋಧನೆ ಮಾಡಿರುವ ಔಷಧಿಯ ಮೂಲಕ  ಕೊರೊನಾ ಸೋಂಕನ್ನು ಗುಣಪಡಿಸಲು ಸಾಧ್ಯ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆರಂಭಿಕ ಕ್ಲಿನಿಕಲ್ ಟ್ರಯಲ್ ಹಂತವನ್ನು ಅವರು ಗೆದ್ದಿದ್ದಾರೆ. ಅವರೇ ಖ್ಯಾತ ಆಯುರ್ವೇದಿಕ್ ವೈದ್ಯ ಡಾಕ್ಟರ್ ಗಿರಿಧರ್ ಕಜೆ.ನೊಂದವರ ಮನದಲ್ಲಿ  ಭರವಸೆಯ ಬೆಳಕು  ಮೂಡಿಸಿದ್ದಾರೆ..

         ಕಳೆದ 23 ವರ್ಷಗಳಿಂದ ಬೆಂಗಳೂರಲ್ಲಿ ಡಾ.ಕಜೆ ಆಯುರ್ವೇದ ಪ್ರಾಕ್ಟೀಸ್ ಮತ್ತು ಸಂಶೋಧನೆ ಮಾಡಿಕೊಂಡು ಬಂದಿದಾರೆ. ಅವರ ‘ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ‘ ಇದೆ. ಅದರ 21 ಶಾಖೆಗಳು ಕೂಡ ಇವೆ. ಈ ಸಂಸ್ಥೆಯ ಮೂಲಕ ಅವರು ಈಗಾಗಲೇ 152 ಶ್ರೇಷ್ಠವಾದ  ಆಯುರ್ವೇದ ಔಷಧಿಗಳನ್ನು ಸಂಶೋಧನೆ ಮಾಡಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು  ರೋಗಿಗಳಿಗೆ ನಮ್ಮದೇ  ಔಷಧಿ ನೀಡಿ ಗುಣಪಡಿಸಿದ್ದಾರೆ.

      ಆಯುರ್ವೇದ  ಪದ್ಧತಿಯಲ್ಲಿ ಅಡ್ದ ಪರಿಣಾಮ ಇಲ್ಲ ಮತ್ತು  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ನಂಬಿಕೆಯೇ ನಮ್ಮ ಚಿಕಿತ್ಸಾ ಪದ್ಧತಿಗೆ ಆಧಾರ!

        ಕಳೆದ 20 ವರ್ಷಗಳಿಂದ ವೈರಸ್ ಕಾಯಿಲೆಗಳಿಗೆ ಅವರೇ ಅಭಿವೃದ್ಧಿ ಪಡಿಸಿರುವ   BHOUMYA ಮತ್ತು SATHMYA ಮಾತ್ರೆಗಳನ್ನು  ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. H1N1, ಡೆಂಗ್ಯೂ, ಚಿಕೂನ್ ಗುನ್ಯಾ , ಕ್ಷಯ ಮೊದಲಾದ ಕಾಯಿಲೆಗಳಿಗೆ ಕೂಡ ಈ ಎರಡು ಮಾತ್ರೆಗಳು ರಾಮಬಾಣ ಆಗಿವೆ. 100% ಯಶಸ್ಸು ಸಿಕ್ಕಿದೆ.

     ಈ ವರ್ಷ ಕೊರೊನಾ ಎಂಬ ವೈರಸ್ ಕಾಯಿಲೆಯು ಜಗತ್ತನ್ನು ಕಾಡಿದಾಗ ಅದೇ ಮಾತ್ರೆಗಳನ್ನು ಯಾಕೆ ರೋಗಿಗಳ ಮೇಲೆ ಪ್ರಯೋಗ ಮಾಡಬಾರದು ಎಂದು ಯೋಚಿಸಿದರು.  ಕರ್ನಾಟಕ ಸರಕಾರದ ಮೂಲಕ ಐಸಿಎಂಆರ್ ಸಂಸ್ಥೆಗೆ ಎಪ್ರಿಲ್ 8ರಂದು ನಾವು ಪ್ರಸ್ತಾವನೆ ಕೊಟ್ಟರು. ಆಗ ಮಹಾಮಾರಿ ಇಷ್ಟು ದೊಡ್ಡ ಮಟ್ಟದಲ್ಲಿ  ವ್ಯಾಪಿಸಿರಲಿಲ್ಲ. ಬೆಂಗಳೂರಿನ ಕೊರೊನಾ ಆಸ್ಪತ್ರೆ ಆಗಿರುವ  ‘ವಿಕ್ಟೋರಿಯಾ ಆಸ್ಪತ್ರೆ’ಯಲ್ಲಿ ಒಂದು ಸಣ್ಣ ಸ್ಯಾಂಪಲ್ ರೋಗಿಗಳ ಮೇಲೆ ಪ್ರಯೋಗ ಮಾಡುವ ಅವಕಾಶ ಸರಕಾರ ನೀಡಿತು.

     ಇಲ್ಲಿ ದೊರೆತ ಸ್ಯಾಂಪಲ್ ಗ್ರೂಪ್ 10 ಕೊವಿಡ್ ರೋಗಿಗಳದ್ದು. ಅವರು ರೋಗ ಲಕ್ಷಣ ಇರುವಂತಹ ರೋಗಿಗಳು. ಅವರ ವಯಸ್ಸು 23-65 ಆಗಿತ್ತು. ಅವರಲ್ಲಿ ಕೊರೊನಾ ಜೊತೆಗೆ ಮಧುಮೇಹ, ಟಿಬಿ ಮೊದಲಾದ ಇತರ ಕಾಯಿಲೆಗಳು ಕೂಡ ಇದ್ದವು. 

       ಸರಕಾರದ ನಿಯಮಗಳ ಪ್ರಕಾರ ಕೊಡುವ ಆಲೋಪತಿ ಮಾತ್ರೆಗಳನ್ನು ಅವರಿಗೆ  ನೀಡಲಾಗಿತ್ತು. ಅದರ ಜೊತೆಗೆ ಡಾ.ಕಜೆಯವರ ಎರಡು ಮಾತ್ರೆಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿಲಾಯಿತು. ಆಶ್ಚರ್ಯ ಅಂದರೆ ಕೇವಲ 2-4 ದಿನಗಳಲ್ಲಿ ರೋಗ ಲಕ್ಷಣಗಳು ಪೂರ್ತಿ ಮಾಯ ಆದವು! ಕೇವಲ ಹತ್ತು ದಿನಗಳಲ್ಲಿ ಕೊರೊನಾ ವರದಿ   ನೆಗೆಟಿವ್ ಬಂದಿತು! ಆ ರೋಗಿಗಳು ಪೂರ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದದ್ದು ಅದ್ಭುತ ಅನುಭವ. ಈ ಪ್ರಯೋಗ ನಡೆದದ್ದು ಜೂನ್ ತಿಂಗಳಲ್ಲಿ. ಆ ಔಷಧಿಗೆ ಖರ್ಚು ಆದದ್ದು ಒಬ್ಬ ರೋಗಿಗೆ

90 ರಿಂದ 180 ರೂಪಾಯಿ!

       ಕರ್ನಾಟಕ ಸರಕಾರ ಮತ್ತು ಆರೋಗ್ಯ ಮಂತ್ರಿಗಳಾದ ರಾಮುಲು ಅವರು ಡಾ.ಕಜೆಯರನ್ನು ಟಾಸ್ಕ್ ಫೋರ್ಸ್ ಮೀಟಿಂಗಲ್ಲಿ ಕರೆದು ಬೆನ್ನು ತಟ್ಟಿದ್ದಾರೆ. ಕಜೆಯವರ ಮಾತನ್ನು ತಾಳ್ಮೆಯಿಂದ ಕೇಳಿದ್ದಾರೆ. ಈ ಔಷಧಿ ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿ ಇದೆ. ಆದ್ದರಿಂದ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ.

       ಸರಕಾರ ಮತ್ತು ICMR ಸಂಸ್ಥೆಯು  ಅನುಮತಿ ಕೊಟ್ಟರೆ ಇನ್ನೂ ದೊಡ್ಡ ಸ್ಯಾಂಪಲ್  ಗ್ರೂಪಿಗೆ ಅದನ್ನು ಪ್ರಯೋಗ ಮಾಡಲು ಸಿದ್ಧರಿದಾರೆ.. 5,000 ಮಂದಿಗೆ ಬೇಕಾದರೂ ಉಚಿತ ಔಷಧಿ ಕೊಡಲು ತಯಾರಿದ್ದಾರೆ. ಕೊರೊನಾ ಜೊತೆಗೆ ಮಧುಮೇಹ, ಹೃದಯ ಕಾಯಿಲೆ, ಉಸಿರಾಟದ ಸಮಸ್ಯೆ, ಹೈಪರ್ ಟೆನ್ಷನ್ ಇರುವ ಸಂಕೀರ್ಣ ಲಕ್ಷಣದ  ರೋಗಿಗಳಿಗೂ ಇದನ್ನು ಪ್ರಯೋಗ ಮಾಡಿ ನೋಡಬಹುದು. ಅವರು 100% ಗುಣಮುಖ ಆಗುವ ಭರವಸೆ ಇದೆ. ಕಾಯಿಲೆ ಮುಂದಿನ ಹಂತಕ್ಕೆ ಹರಡುವ ಸಾಧ್ಯತೆಯನ್ನು ಕೂಡ  ಈ ಔಷಧಿಯಿಂದ ತಡೆಯಬಹುದು ಎಂಬ ಪೂರ್ಣ ಭರವಸೆ ಡಾ.ಕಜೆಯವರಿಗಿದೆ. ಅವರಿಗೆ ಇದರಿಂದ ಕೀರ್ತಿ, ಹಣ ಯಾವುದೂ ಬೇಡ. ಈ ಔಷಧಿಗಳ ಲೈಸೆನ್ಸ್ ಸರಕಾರಕ್ಕೆ ನೀಡಲು ತಯಾರಿದ್ದಾರೆ. ಔಷಧಿಯ ಫಾರ್ಮುಲಾ ಕೂಡ  ಉಚಿತವಾಗಿ ನೀಡಲು ಮುಂದಾಗಿದ್ದಾರೆ.. ಸರಕಾರವೇ ಮಾತ್ರೆಗಳನ್ನು ಉತ್ಪಾದನೆ ಮಾಡಬಹುದು.

     ನಮಗೆ ಈ ಔಷಧಿಯ ಮೇಲೆ ಪೂರ್ಣ ನಂಬಿಕೆ ಇದೆ. ರಿಸ್ಕ್ ತೆಗೆದುಕೊಳ್ಳಲು ಕೂಡ ನಾವು ಸಿದ್ಧರಿದ್ದೇವೆ. ದೊಡ್ಡ ಸಾಂಪಲ್ ಗ್ರೂಪಿನ ಮೇಲೆ ಪ್ರಯೋಗ ನಡೆಸಲು ನಾವು ಸಿದ್ಧರಿದ್ದೇವೆ. ಇದು ಸಂಭ್ರಮ ಪಡುವ ಹೊತ್ತಲ್ಲ. ಒಂದು ಆಶಾಕಿರಣ ಮಾತ್ರ. ಒಂದು ಬೆಳಕಿನ ಕಿಂಡಿ ಮಾತ್ರ. ಕಾಯಿಲೆ ಸಂಪೂರ್ಣ ತೊಲಗುವ ತನಕ ನಮ್ಮ  ಪ್ರಯತ್ನಗಳು ನಿಲ್ಲುವುದಿಲ್ಲ ಎನ್ನುತ್ತಾರೆ ಡಾ.ಕಜೆ.

     ಯಾವುದೇ ಹೊಸ ಔಷಧಿ ಜನರನ್ನು ತಲುಪುವ ಮೊದಲು ಸರಣಿಯಲ್ಲಿ  ಕ್ಲಿನಿಕಲ್ ಟ್ರಯಲ್‌ಗಳು ನಡೆಯಬೇಕು. ಅದಕ್ಕೆ ನಾವು ಸಿದ್ಧ ಎಂದು ಕಜೆಯವರು  ಹೇಳಿದ್ದಾರೆ. “ಭಾರತದ ಆಯುರ್ವೇದ ಚಿಕಿತ್ಸಾ ಪದ್ಧತಿ ಮತ್ತೆ ಜಗತ್ತನ್ನು ಆಳಬೇಕು” ಎನ್ನುವಾಗ  ಡಾಕ್ಟರ್ ಗಿರಿಧರ್ ಅವರ ಕಣ್ಣಲ್ಲಿ ಭರವಸೆಯ ಬೆಳಕು ಕಾಣುತ್ತಿದೆ.

        ಈಗ ನಾನು ಗಿರಿಧರ್ ಕಜೆ ಅವರ ಬಗ್ಗೆ ನಾಲ್ಕು ವಾಕ್ಯ ಬರೆಯಬೇಕು. ಅವರದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ  ಕಬಕದ  ಪ್ರಸಿದ್ಧವಾದ “ಕಜೆ ಮನೆತನ”. ಅವರ ತಂದೆ ಶಿವರಾಮ ಕಜೆ ಅವರು ಕೃಷಿಕರು ಮತ್ತು ಸಹಕಾರಿ ಧುರೀಣ. ಗಿರಿಧರ್ ಕಜೆ ಅವರು ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ  ಓದಿದವರು. ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ BAMS, ಮುಂದೆ ಬೆಂಗಳೂರಿನ ಸರಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಎಂಡಿ ಪದವಿ ಪಡೆದರು.

23 ವರ್ಷಗಳಿಂದ ಬೆಂಗಳೂರಲ್ಲಿ ಜನಪ್ರಿಯ  ವೈದ್ಯರಾಗಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಕರ ಟಿವಿಯ ಯುಗಾದಿ ಪುರಸ್ಕಾರ, ರವಿಶಂಕರ್ ಗುರೂಜಿ ಅವರಿಂದ ಪ್ರಶಸ್ತಿ, ವಿಪ್ರೋ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಲಯನ್ಸ್ ಸಂಸ್ಥೆಯ ಪ್ರಶಸ್ತಿ…. ಇವೆಲ್ಲವೂ ದೊರೆತಿವೆ. ಅವರು ಬರೆದ Professional Secrets ಎಂಬ ಪುಸ್ತಕ 6 ಮುದ್ರಣ ಕಂಡಿದ್ದು 8,000 ಪ್ರತಿಗಳು ಮಾರಾಟ ಆಗಿವೆ. ಅವರೇ ಅಧ್ಯಕ್ಷರಾಗಿರುವ ಕಜೆ ಆಯುರ್ವೇದಿಕ್ ಫೌಂಡೇಶನ್ ಮೂಲಕ ಸಮಾಜ  ಸೇವೆ ಸಲ್ಲಿಸುತ್ತಿದ್ದಾರೆ.

.













































error: Content is protected !!
Scroll to Top