ಮಾಜಿ ರೈಫಲ್‌ ಶೂಟಿಂಗ್‌ ಚಾಂಪಿಯನ್‌ ಪೂರ್ಣಿಮಾ ನಿಧನ

ಭಾರತದ ಮಾಜಿ ಶೂಟರ್ ಮತ್ತು ತರಬೇತುದಾರೆ ಪೂರ್ಣಿಮಾ ಜಾನಾನೆ ತಮ್ಮ 42 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.

ಭಾರತೀಯ ರೈಫಲ್ ಶೂಟರ್ ಆಗಿದ್ದ ಪೂರ್ಣಿಮಾ ಅವರು ಎರಡು ವರ್ಷಗಳಿಂದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದರು. ಗುಣವಾಗದ ಕ್ಯಾನ್ಸರ್‌ನಿಂದಾಗಿ ಇಂದು ಪೂರ್ಣಿಮಾ ಪುಣೆಯಲ್ಲಿ ಕೊನೆಯುಸಿರೆಳೆದರು.

ಪೂರ್ಣಿಮಾ ವಿಶ್ವಕಪ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು 10 ಮೀಟರ್ ಏರ್ ರೈಫಲ್‌ನಲ್ಲಿ ದೀರ್ಘಕಾಲದವರೆಗೆ ರಾಷ್ಟ್ರೀಯ ದಾಖಲೆ ಹೊಂದಿದ್ದರು. ಅವರ ಯಶಸ್ಸಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಶಿವ ಛತ್ರಪತಿ ಕ್ರೀಡಾ ಪ್ರಶಸ್ತಿಯನ್ನು ನೀಡಿತು.

ಎರಡು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾಗ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿತ್ತು.

ಪೂರ್ಣಿಮಾ ಭಾರತಕ್ಕಾಗಿ ಎಸ್‌ಎಎಫ್ ಗೇಮ್ಸ್, ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.

error: Content is protected !!
Scroll to Top