ನಟಿ ನವ್ಯಾಗೆ ಕೊರೋನಾ ಸೋಂಕು

ಬೆಂಗಳೂರು: ಕೊರೋನಾ ಹೆಮ್ಮಾರಿ ಇದುವರೆಗೆ ಯಾವುದೇ ಕನ್ನಡ ಕಲಾವಿದರಿಗೆ ತಟ್ಟಿಲ್ಲ ಎಂಬ ಸಮಾಧಾನವಿತ್ತು. ಆದರೆ ಈಗ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿರುವ ನವ್ಯಾ ಸ್ವಾಮಿ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಇನ್ ಸ್ಟಾಗ್ರಾಂ ಮೂಲಕ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
 
ಆದರೆ ನಾನು ಧೈರ್ಯವಾಗಿದ್ದು, ವೈದ್ಯರ ಸಲಹೆಯಂತೆ ಸೂಕ್ತ ಔಷಧ, ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇನೆ. ನನ್ನ ದೇಹವನ್ನು ಕೊರೊನಾ ವಿರುದ್ಧ ಹೋರಾಡಲು ಅಣಿಗೊಳಿಸಿದ್ದೇನೆ. ವಿಶ್ರಾಂತಿ ತೆಗೆದುಕೊಂಡಿದ್ದೇನೆ. ಹಾಗೆಯೇ ಯಾವುದೇ ಇಲ್ಲಸಲ್ಲದ ವರದಿಗಳಿಗೆ ಕಿವಿಗೊಡದೇ ನನ್ನ ಆರೋಗ್ಯ ಕಾಪಾಡುವುದರತ್ತ ಗಮನ ಕೊಡುತ್ತಿದ್ದೇನೆ ಅಂದಿದ್ದಾರೆ.





























































error: Content is protected !!
Scroll to Top