ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್

ರಸ್ತೆಗಳಲ್ಲಿ ನಡೆದಾಡುವಾಗ ಕರೆ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದರ ಕುರಿತು ಜನರಲ್ಲಿ ಎಚ್ಚರಿಕೆ ಮೂಡಿಸಲು ಅಭಿಯಾನವೊಂದನ್ನು ನಡೆಸಲಾಗುತ್ತಿದೆ.

ಟೋಕಿಯೊ: ರಸ್ತೆಗಳಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಈಗ  ಒಂದು ಸಾಮಾನ್ಯ ವಿಷಯ. ಈದು ಸಾರ್ವತ್ರಿಕವಾದ ಪಿಡುಗು. ಆದರೆ ಜಪಾನ್ ನ ಯಾಮಾಟೋ ನಗರದಲ್ಲಿ ಇನ್ಮುಂದೆ ನಿಮಗೆ ಈ ರೀತಿಯ ಉದಾಹರಣೆಗಳು ಕಾಣಲು ಸಿಗುವುದಿಲ್ಲ. ಏಕೆಂದರೆ ಈ ಕುರಿತು ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಿಲ್ ರಸ್ತೆಗಳಲ್ಲಿ ನಡೆದಾಡುವ ಜನರ ಮೊಬೈಲ್ ಬಳಕೆಯ ಮೇಲೆ ನಿಷೇಧ ವಿಧಿಸಲಿದೆ.

ರಸ್ತೆಗಳಲ್ಲಿ ಓಡಾಡುವಾಗ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಉಂಟಾಗುವ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಗರದ ಆಡಳಿತ ಮಂಡಳಿ ಹೇಳಿದೆ.

ಈ ನಿರ್ಬಂಧ ಮುಂದಿನ ತಿಂಗಳು ಜಾರಿಗೆ ಬರುವ ಸಾಧ್ಯತೆ ಇದೆ. ಬೀದಿಗಳಲ್ಲಿ ಓಡಾಡುವಾಗ ಕರೆ ಮಾಡುವುದು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಜನರಿಗೆ ಎಚ್ಚರಿಕೆ ನೀಡುವ ಅಭಿಯಾನವನ್ನೂ ನಡೆಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಸೂದೆ ಅಂಗೀಕಾರವಾದರೆ, ಇದು ಜಪಾನ್‌ನಲ್ಲಿ ಈ ರೀತಿಯ ಮೊದಲ ಮಸೂದೆಯಾಗಿದೆ.

ಈ ಕುರಿತು ಅಮೆರಿಕಾದಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಪ್ರತಿವರ್ಷ 1.6 ಮಿಲಿಯನ್ ಕಾರು ಅಪಘಾತಗಳು ಸಂಭವಿಸುತ್ತಿದ್ದು, ಇವುಗಳಲ್ಲಿ ಶೇ.25 ರಷ್ಟು ಅಪಘಾತಗಳು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಸಂಭವಿಸುತ್ತವೆ ಎನ್ನಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವ್ಯಕ್ತಪಡಿಸಿರುವ ಒಂದು ಅಂದಾಜಿನ ಪ್ರಕಾರ, ಮೊಬೈಲ್‌ಗಳ ಬಳಕೆಯು ಅಪಘಾತಗಳ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ಆಸ್ಟ್ರೇಲಿಯಾದಲ್ಲಿ, 9 ಪ್ರತಿಶತದಷ್ಟು ಮಾರಣಾಂತಿಕ ಕಾರು ಅಪಘಾತಗಳು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುತ್ತಿದ್ದ ಚಾಲಕರಿಂದ ಸಂಭವಿಸಿವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡುವ ಹಾರ್ವರ್ಡ್ ವಿಶ್ವವಿದ್ಯಾಲಯದ ತಜ್ಞ ಪ್ರಕಾರ, ಕಾರ್  ಚಲಾಯಿಸುವ ವೇಳೆ ಟೆಕ್ಸ್ಟಿಂಗ್ ಕಾರಣ ಪ್ರತಿವರ್ಷ 3,30,000 ಜನರು ಗಾಯಗೊಳ್ಳುತ್ತಾರೆ.







































error: Content is protected !!
Scroll to Top