ಚೀನ ಸರಕುಗಳಿಗೆ ಬಹಿಷ್ಕಾರ- ಆಹಾರ ಪೂರೈಕೆ ಸಚಿವಾಲಯದಿಂದ ಚೀನಕ್ಕೆ ಗುದ್ದು

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ವಿದೇಶಿ ಸರಕುಗಳ ಮಾನದಂಡಗಳ ಮೇಲೆ ಪರೀಕ್ಷೆ ನಡೆಸಲು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ದಿಲ್ಲಿ: ಗಡಿಭಾಗದಲ್ಲಿ ಉಪಟಳ ಕೊಡಿತ್ತಿರುವ ಚೀನಕ್ಕೆ ಕಡಿವಾಣ ಹಾಕಲು ಭಾರತದಲ್ಲಿ ಚೀನ ದೇಶದ ಸರಕುಗಳ ಮೇಲಿನ ನಿಷೇಧ ಮುಂದುವರೆದಿದ್ದು, ಇದೀಗ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಚೀನದ ಉತ್ಪನ್ನಗಳಿಗೆ ತಮ್ಮ ಸಚಿವಾಲಯದ ಬಾಗಿಲುಗಳನ್ನು ಮುಚ್ಚಿದ್ದಾರೆ. ತಮ್ಮ ಇಲಾಖೆಯಲ್ಲಿ ಈಗ ಯಾವುದೇ ಚೀನ ಸರಕುಗಳು ಬರುವುದಿಲ್ಲ ಮತ್ತು ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ವಿದೇಶಿ ಸರಕುಗಳನ್ನು ಸಹ ಪರೀಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕೇಂದ್ರ ಆಹಾರ ಸಚಿವರ ಈ ನಿರ್ಣಯದ ಬಳಿಕ ಇದೀಗ ಸಚಿವಾಲಯದಲ್ಲಿ ಬಳಕೆಯಾಗುವ ಉತ್ಪನ್ನಗಳು ಮತ್ತು ಸಚಿವಾಲಯದ ಅಡಿ ಬರುವ ಇಲಾಖೆ ಮತ್ತು ಬಳಸಲಾಗುವ ಸರಕುಗಳ ಖರೀದಿಯಲ್ಲಿ ಸಕ್ಕರೆಯ ಉತ್ಪನ್ನಗಳು ಶಾಮೀಲಾಗಿರುವುದಿಲ್ಲ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ) ಮತ್ತು ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (ಸಿಡಬ್ಲ್ಯುಸಿ) ಮುಂತಾದ ಸಂಸ್ಥೆಗಳು ಕೇಂದ್ರ ಆಹಾರ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತವೆ.

ಚೀನಾದಲ್ಲಿ ತಯಾರಾದ ಯಾವುದೇ ಸರಕನ್ನು ಜಿಇಎಂ ಪೋರ್ಟಲ್‌ನಿಂದ ಅಥವಾ ಬೇರೆಡೆಯಿಂದ ಖರೀದಿಸಲಾಗುವುದಿಲ್ಲ ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ವಿದೇಶಿ ಸರಕುಗಳನ್ನು ಮಾನದಂಡಗಳ ಮೇಲೆ ಪರೀಕ್ಷಿಸಲು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈ ನಿಯಮಗಳು ಕೇವಲ ಚೀನಾಕ್ಕೆ ಮಾತ್ರವಲ್ಲದೆ ವಿದೇಶದಿಂದ ಬರುವ ಎಲ್ಲಾ ಸರಕುಗಳಿಗೂ ಅನ್ವಯಿಸಲಿವೆ.

ಭಾರತೀಯ ಸರಕುಗಳನ್ನು ವಿದೇಶಿ ಮಾನದಂಡಗಳ ಮೇಲೆ ಯಾವ ರೀತಿ ಪರೀಕ್ಷಿಸಲಾಗುತ್ತದೆಯೋ ಅದೇ ರೀತಿಯ ವಿದೇಶಿ ಸರಕುಗಳನ್ನು ಕೂಡ ಇಲ್ಲಿ ಭಾರತೀಯ ಮಾನದಂಡಗಳ ಆಧಾರದ ಮೇಲೆ ಪರೀಕ್ಷಿಸಲಾಗುವುದು ಎಂದು ಅವರು ಹೇಳಿದ್ದಾರೆ.









































































































































































error: Content is protected !!
Scroll to Top