Sunday, October 24, 2021
spot_img
Homeಕ್ರೀಡೆಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು

ಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು

ಕಾರ್ಕಳ : ಏಕದಿನ ಕ್ರಿಕೆಟ್‌ನಲ್ಲಿ ಒಂದೊಂದು ರನ್‌ ಕೂಡ ಮುಖ್ಯ.ಶತಕ , ಅರ್ಧ ಶತಕ ಬಾರಿಸಿದರಂತೂ ಗ್ರೇಟ್.‌ಆದರೆ   ಕ್ರಿಕೆಟ್‌ನ ಯಾವುದೇ ಸ್ವರೂಪದಲ್ಲಿ, ಅರ್ಧ ಶತಕಕ್ಕೆ ಶತಕದಷ್ಟು ಮಹತ್ವ ನೀಡಲಾಗಿಲ್ಲ. ಆದರೂ ಅರ್ಧಶತಕಗಳನ್ನು ಆಟಗಾರನ ವೈಯಕ್ತಿಕ ಸಾಧನೆಯಾಗಿ ಪರಿಗಣಿಸುತ್ತಾರೆ. ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಅರ್ಧಶತಕವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನಿಗೆ ಅರ್ಧಶತಕ ಕಡಿಮೆ ಮಹತ್ವದ್ದಲ್ಲ. ಇಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಐದು ಬ್ಯಾಟಿಂಗ್‌ ದಿಗ್ಗಜರ ವಿವರವಿದೆ.

ಸಚಿನ್ ತೆಂಡೂಲ್ಕರ್
ಕ್ರಿಕೆಟ್‌ನ ದೇವರು, ಕ್ರಿಕೆಟ್ ಪ್ರಪಂಚದ ಬಹುತೇಕ ಎಲ್ಲ ದಾಖಲೆಗಳನ್ನು ಹೊಂದಿರುವಸಚಿನ್‌ ತೆಂಡುಲ್ಕರ್‌  ಅವರನ್ನು ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗುತ್ತದೆ. ಸಚಿನ್ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಅದ್ಭುತಗಳನ್ನು ಮಾಡಿದಾರೆ.  ಏಕದಿನ ಕ್ರಿಕೆಟ್‌ನಲ್ಲಿ ಅವರು ಯಾವಾಗಲೂ ತಮ್ಮ ತಂಡದ ಉತ್ಸಾಹವನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡಿದ್ದಾರೆ. ಓನ್‌ ಡೇ  ಕ್ರಿಕೆಟ್‌ನಲ್ಲಿ ಸಚಿನ್ ಅವರ ಹೆಸರು ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಆಟಗಾರನಾಗಿ ದಾಖಲಾಗಿದೆ ಮತ್ತು ಹೆಚ್ಚು ಅರ್ಧಶತಕಗಳನ್ನು ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ 96 ಅರ್ಧಶತಕಗಳನ್ನು ಗಳಿಸಿದ್ದಾರೆ.

ಕುಮಾರ್ ಸಂಗಕ್ಕರ
ಕ್ರಿಕೆಟ್ ಜಗತ್ತಿನಲ್ಲಿ ಕುಮಾರ್ ಸಂಗಕ್ಕರ  ಅವರ ಹೆಸರು ಅರಿಯದವರಿಲ್ಲ. ಶ್ರೀಲಂಕಾದ ಈ ಮಾಜಿ  ಅನುಭವಿ ಆಟಗಾರ ತಮ್ಮ ಆಟದಿಂದ ಮೈದಾನದಲ್ಲಿ ಹಲವಾರು ಬಾರಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಂಗಕ್ಕರ 93 ಅರ್ಧಶತಕ ಬಾರಿಸಿದ್ದಾರೆ. ಸಂಗಕ್ಕರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 404 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ 93 ಅರ್ಧಶತಕಗಳನ್ನು 25 ಸೆಂಚುರಿಗಳು ಅವರ ಹೆಸರಿನಲ್ಲಿ ದಾಖಲಾಗಿದೆ.

ಜಾಕಸ್ ಕಾಲಿಸ್  
ಜಾಕಸ್‌ ಕಾಲಿಸ್‌ ದಕ್ಷಿಣ ಆಫ್ರಿಕಾ ತಂಡದ ಈ ಅದ್ಭುತ ಆಲ್‌ರೌಂಡರ್ ಬ್ಯಾಟಿಂಗ್ ವಿಶ್ವಪ್ರಸಿದ್ಧ ಬ್ಯಾಟ್ಸ್‌ಮನ್. ಕ್ರಿಕೆಟ್‌ನ ಪ್ರತಿಯೊಂದು ಆಯಾಮದಲ್ಲೂ ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಕಾಲಿಸ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 328 ಏಕದಿನ ಪಂದ್ಯಗಳಲ್ಲಿ 86 ಅರ್ಧಶತಕಗಳನ್ನು ಗಳಿಸಿದ್ದಾರೆ. ಅರ್ಧ ಶತಕದ ಜೊತೆಗೆ ಕಾಲಿಸ್ ಏಕದಿನ ಪಂದ್ಯದಲ್ಲಿ 17 ಶತಕಗಳನ್ನು ಹೊಡೆದಿದ್ದಾರೆ.

ರಾಹುಲ್ ದ್ರಾವಿಡ್  
ರಾಹುಲ್ ದ್ರಾವಿಡ್ ತಮ್ಮ ಅಮೋಘವಾದ  ಆಟದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಭಾರತ ಕ್ರಿಕೆಟ್ ತಂಡದ ‘ದಿ ವಾಲ್’ ಎಂದೇ ಖ್ಯಾತಿ ಪಡೆದಿದ್ದ ರಾಹುಲ್ ದ್ರಾವಿಡ್   ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 83 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ 12 ಶತಕಗಳನ್ನು ಗಳಿಸಿದ್ದಾರೆ.

ಇಂಜಮಾಮುಲ್ ಹಕ್

ಪಾಕಿಸ್ಥಾನದ ಮಾಜಿ ನಾಯಕ ಇಂಜಮಾಮುಲ್ ಹಕ್ ಅವರ ಕಾಲದಲ್ಲಿ ಪಾಕಿಸ್ಥಾನ ಕ್ರಿಕೆಟ್‌ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಪಾಕಿಸ್ಥಾನ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಂಜಮಾಮ್ ಹೆಸರನ್ನು ಸೇರಿಸಲಾಗಿದೆ. ರಾಹುಲ್ ದ್ರಾವಿಡ್ ಅವರಂತೆ ಇಂಜಮಾಮ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 83 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲಿ ಏಕದಿನ ಪಂದ್ಯಗಳಲ್ಲಿ ದ್ರಾವಿಡ್ ಅವರ ಬ್ಯಾಟಿಂಗ್ ಸರಾಸರಿ 39.16 ಆಗಿದ್ದರೆ, ಇಂಜಮಾಮ್ ಸರಾಸರಿ 39.52. ಇಂಜಮಾಮ್ ಏಕದಿನ ಪಂದ್ಯಗಳಲ್ಲಿ 10 ಶತಕಗಳನ್ನು ಗಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!