ಮೇ ತಿಂಗಳಲ್ಲಿ ಪಾಕಿಸ್ಥಾನದಲ್ಲಿ ವಿಮಾನ ಪತನಗೊಂಡು ೯೮ ಮಂದಿ ಸಾವನ್ನಪ್ಪಿದ ದುರ್ಘಟನೆಯ ಬಳಿಕ ಅಲ್ಲಿನ ಪೈಲಟ್ ಗಳ ಲೈಸೆನ್ಸ್ ಪರಿಶೀಲನೆ ನಡೆಸಿದಾಗ ಕಾರ್ಯನಿರತ ೮೬೦ ಪೈಲಟ್ ಗಳ ಪೈಕಿ ೨೬೨ ಮಂದಿ ನಕಲಿ ಲೈಸೆನ್ಸ್ ಹೊಂದಿರುವುದು ಪತ್ತೆಯಾಗಿದೆ.೪೩೪ಪೈಲಟ್ ಗಳು ನಕಲಿ ಅಥವಾ ಅಡ್ಡದಾರಿಯ ಮೂಲಕ ಲೈಸೆನ್ಸ್ ಪಡೆದುಕೊಂಡಿದ್ದಾರೆ.ಈ ಪೈಕಿ ೧೪೧ ಪೈಲಟ್ ಗಳನ್ನು ಈಗಾಗಲೆ ಮನೆಗೆ ಕಳುಹಿಸಲಾಗಿದೆ.
ಎ೩೨೦ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೈಲಟ್ ಗಳು ಕೊರೊನ ವೈರಸ್ ಬಗ್ಗೆ ಪಟ್ಟಾಂಗ ಹೊಡೆದ ಕಾರಣ ಎಳೆದ ತಿಂಗಳು ವಿಮಾನ ಪತನಗೊಂಡಿತ್ತು.ಆ ಬಳಿಕ ತನಿಖೆ ನಡೆಸಿದಾಗ ಪೈಲಟ್ ಗಳು ನಕಲಿ ಲೈಸೆನ್ಸ್ ಹೊಂದಿರುವ ವಿ಼ಷಯ ಬಹಿರಂವಾಗಿತ್ತು.