ಕಾರ್ಕಳ : ಗಡಿ ರೇಖೆಯಲ್ಲಿ ಉದ್ದಟತನ ತೋರುತ್ತಿರುವ ಚೀನಾ ದೇಶಕ್ಕೆ ನಮ್ಮ ಸೈನಿಕರು ಮರೆಯಲಾಗದ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಚೀನಾ ವಸ್ತುಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಇದೀಗ ಕೇಂದ್ರ ಸರಕಾರ ಚೀನಾ ಆಪ್‌ಗಳನ್ನು ನಿಷೇಧಿಸಿರುವುದು ಚೀನಾಕ್ಕೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಾವೆಲ್ಲರೂ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಚೀನಾ ವಸ್ತುಗಳನ್ನು, ಆಪ್ ಬಳಸದೇ ಅವರಿಗೆ ಆರ್ಥಿಕ ಹೊಡೆತ ನೀಡುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ವಿಖ್ಯಾತ್ ಅವರು ಮನವಿ ಮಾಡಿಕೊಂಡರು.