• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾನೂನು ಕಣಜ

law, information, vijendra, karkala, hebri,udupi, kannada

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ

ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ಕ್ರೀಡಾ ಸಂಕೀರ್ಣಗಳಂತಹ ಸೂಕ್ಷ್ಮ ಸಾರ್ವಜನಿಕ ಪ್ರದೇಶಗಳಿಂದ ಅಕ್ರಮಣಕಾರಿ ಅಥವಾ ರೇಬಿಸ್ ಪೀಡಿತ ಬೀದಿನಾಯಿಗಳನ್ನು ಕೊಲ್ಲದೇ ಅವುಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೀಡಿರುವ ಆದೇಶವನ್ನು ಪರಿಪಾಲಿಸುವ ದೃಷ್ಟಿಯಿಂದ ಸರಕಾರವು ಬೀದಿನಾಯಿಗಳ ನಿರ್ವಹಣೆ ಮತ್ತು ಕಡಿತದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳಿಂದ ಜ್ಯಾರಿಯಲ್ಲಿದ್ದ ಕಾನೂನಿಗೆ ಪೂರಕವಾಗಿ ಪ್ರಾಣಿ ಸಂತಾನ ನಿಯಂತ್ರಣ ನಿಯಮಗಳು- 2023 ಎಂಬ ನಿಯಮವನ್ನು ಕರ್ನಾಟಕದಾದ್ಯಂತ ಜ್ಯಾರಿಗೆ ತಂದಿರುತ್ತದೆ. ಈ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ Read More »

ಅಪಘಾತದ ಸಂಧರ್ಭದಲ್ಲಿ ವಾಹನ ಚಾಲಕರ / ಪೋಲಿಸರ ಜವಾಬ್ದಾರಿ ಮತ್ತು ಕರ್ತವ್ಯಗಳು

1.ಮೋಟಾರು ವಾಹನಗಳ ಕಾಯ್ದೆ, 1988 ಎಂಬ ಕಾನೂನು ಸಾರ್ವಜನಿಕ ಸ್ಥಳದಲ್ಲಿನ ಮೋಟಾರು ವಾಹನ ಚಲಾವಣೆಯನ್ನು ನಿಯಂತ್ರಿಸುವ ಹಾಗೂ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರಕಾರವು ಜ್ಯಾರಿಗೊಳಿಸಿರುವ ನಿಯಮಗಳ ಅನುಸಾರ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ವಾಹನ ಅಪಘಾತದ ಸಂದರ್ಭದಲ್ಲಿ ಕಾನೂನಿನ ನಿಯಮಾನುಸಾರದ ಮತ್ತು ನೈತಿಕ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಹೊಂದಿರುತ್ತಾರೆ. 2.ಎಲ್ಲಾ ಮೋಟಾರು ವಾಹನಗಳ ಅಪಘಾತಗಳಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಲ್ಲಿ ಅಥವಾ ಆಸ್ತಿಗೆ

ಅಪಘಾತದ ಸಂಧರ್ಭದಲ್ಲಿ ವಾಹನ ಚಾಲಕರ / ಪೋಲಿಸರ ಜವಾಬ್ದಾರಿ ಮತ್ತು ಕರ್ತವ್ಯಗಳು Read More »

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ – 2014

ನಮ್ಮ ದೇಶದ ಉನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಭಾರತ ಸಂವಿಧಾನದ 21 ವಿಧಿಯನ್ನು ಉಲ್ಲೇಖಿಸಿ ನೀಡಿರುವ ತೀರ್ಪಿನ ಪ್ರಕಾರ ಜೀವಿಸಲು ಅಗತ್ಯವಿರುವ ಹಕ್ಕುಗಳ ಪೈಕಿ ನೀರಿನ ಹಕ್ಕು ಅತ್ಯಾಗತ್ಯವಾಗಿರುತ್ತದೆ. ಇದರನ್ವಯ ದೇಶದ ಎಲ್ಲಾ ರಾಜ್ಯಗಳು ತನ್ನ ವ್ಯಾಪ್ತಿ ಪ್ರದೇಶದ ಒಳಗಿನ ಎಲ್ಲಾ ಸಾರ್ವಜನಿಕ ಕೆರೆಗಳನ್ನು ಮತ್ತು ನೀರಿನ ತೊಟ್ಟಿಗಳನ್ನು ರಕ್ಷಿಸುವ ಮತ್ತು ಅಭಿವೃದ್ದಿಗೊಳಿಸುವ ಸಂಪೂರ್ಣವಾದ ಜವಾಬ್ದಾರಿಯನ್ನು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ರಾಜ್ಯ ಸರಕಾರವು ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2014’

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ – 2014 Read More »

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882 (ಭಾರತೀಯ ಸರಾಗಗೊಳಿಸುವ ಕಾಯ್ದೆ – 1882) ಎಂಬ ಕಾನೂನು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಅತ್ಯಂತ ಹಳೆಯದಾದ ಆದರೆ ಬಹಳ ಪ್ರಾಮುಖ್ಯವಾದ ಕಾನೂನುಗಳ ಪೈಕಿ ಒಂದಾಗಿರುತ್ತದೆ. ಈ ಕಾನೂನಿನ ಪ್ರಕಾರ ಒಂದು ಆಸ್ತಿಯ ಮಾಲಿಕರು ತನ್ನ ಸ್ವಂತ ಜಮೀನಿನ ಪ್ರಯೋಜನಕ್ಕಾಗಿ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರಕ್ಕೆ ಒಳಪಟ್ಟು ಪಕ್ಕದ ಅಂದರೆ ನೆರೆಕರೆಯವರ ಮಾಲೀಕತ್ವದ ಜಮೀನನ್ನು ನೀರು, ದಾರಿ, ಗಾಳಿ ಮತ್ತು ಬೆಳಕು ಇತ್ಯಾದಿಗಳನ್ನು ತನ್ನ ಭೂಮಿಯ ಪ್ರಯೋಜನಕ್ಕಾಗಿ ಬಳಸಿಕೊಳ್ಳುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾನೆ.

ಇಂಡಿಯನ್ ಈಸ್‌ಮೆಂಟ್ ಆಕ್ಟ್ – 1882 Read More »

ಹಣಕಾಸಿನ ವ್ಯವಹಾರ

ವಾಣಿಜ್ಯ ಕ್ಷೇತ್ರವು ಮುಂದುವರಿದಂತೆ ಸಾಲ ನೀಡುವಿಕೆಯ ಮತ್ತು ಸಾಲ ಪಡೆದುಕೊಳ್ಳುವಿಕೆಯ ವ್ಯವಹಾರವು ಸಮಾಜದಲ್ಲಿ ತ್ವರಿತಗತಿಯಿಂದ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಸಾಮಾನ್ಯರು ಅದರಲ್ಲೂ ಆರ್ಥಿಕವಾಗಿ ಬಳಲಿರುವ ಕೆಲವು ವ್ಯಕ್ತಿಗಳು ತಮ್ಮ ದೈನಂದಿನ ಖರ್ಚುವೆಚ್ಚಗಳಿಗಾಗಿ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಮದುವೆ ಮುಂತಾದ ಕೆಲವು ಅಗತ್ಯದ ಖರ್ಚುಗಳಿಗಾಗಿ ಅನಿವಾರ್ಯವಾಗಿ ಸಾಲವನ್ನು ಪಡೆಯಬೇಕಾದ ಸಂದರ್ಭದಲ್ಲಿ ಕೆಲವು ಅಸಹಾಯಕ ವ್ಯಕ್ತಿಗಳು ಸರಿಯಾಗಿ ಮುಂದಾಲೋಚನೆ ಮಾಡದೇ, ಸಾಲ ನೀಡುವ ಅಥವಾ ಲೇವಾದೇವಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಸಹಿ ಮಾಡಿದ

ಹಣಕಾಸಿನ ವ್ಯವಹಾರ Read More »

ಲೇವಾದೇವಿ ವ್ಯವಹಾರ

ಲೇವಾದೇವಿ ವ್ಯವಹಾರ ಎಂದರೆ ಸಾಲವನ್ನು ನೀಡುವ ಅಥವಾ ಸಾಲವನ್ನು ಪಡಕೊಳ್ಳುವ ವ್ಯವಹಾರವನ್ನು ಲೇವಾದೇವಿ ವ್ಯವಹಾರ ಎನ್ನಲಾಗುತ್ತದೆ. ಕಾನೂನಿನ ನಿಯಮಾನೂಸಾರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಲೇವಾದೇವಿ ವ್ಯವಹಾರವನ್ನು ನಡೆಸಲು ಸರ್ಕಾರದಿಂದ ಸೂಕ್ತ ಲೈಸನ್ಸ್ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಲೇವಾದೇವಿ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಗೊಳಿಸುವ ಮತ್ತು ಮುಗ್ದ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ಉದ್ದೇಶದಿಂದ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ

ಲೇವಾದೇವಿ ವ್ಯವಹಾರ Read More »

ಹಿರಿಯ ನಾಗರಿಕರ ಆಸ್ತಿ ಮತ್ತು ಜೀವದ ರಕ್ಷಣೆ

ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ಧಿ ಅಧಿನಿಯಮ, 2007 ರಿಂದ ನಮ್ಮ ದೇಶದಲ್ಲಿ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಹಿರಿಯ ನಾಗರಿಕರ ಜೀವಕ್ಕೆ ಮತ್ತು ಸ್ವತ್ತಿಗೆ ರಕ್ಷಣೆ ಒದಗಿಸುವುದಕ್ಕಾಗಿ ಸರ್ಕಾರವು ಒಂದು ಸಮಗ್ರ ಕ್ರಿಯಾ ಯೋಜನೆಯನ್ನು ನಿರ್ದಿಷ್ಟ ಪಡಿಸಿ ಜಾರಿಗೊಳಿಸಿರುತ್ತದೆ. ಈ ಪ್ರಕಾರ ತನ್ನ ಸ್ವಂತ ಗಳಿಕೆಯಿಂದ ಅಥವಾ ತನ್ನ ಒಡೆತನದ ಆಸ್ತಿಯಿಂದ ತನ್ನ ಪಾಲನೆ-ಪೋಷಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಮತ್ತು ತಮ್ಮ ಮಕ್ಕಳಿಂದ ಅಥವಾ ಸಂಬಂಧಿಕರಿಂದ ನಿರ್ಲಕ್ಷಕ್ಕೊಳಗಾಗಿರುವ ತಂದೆ ತಾಯಿಯರು ಅಥವಾ ಹಿರಿಯ

ಹಿರಿಯ ನಾಗರಿಕರ ಆಸ್ತಿ ಮತ್ತು ಜೀವದ ರಕ್ಷಣೆ Read More »

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ – 2007

ಕರ್ನಾಟಕ ರಾಜ್ಯದೊಳಗಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಪರಿಣಾಮಕಾರಿಯಾದ ನಿಯಂತ್ರಣವನ್ನು ಹೊಂದುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು 2007ನೇ ಇಸವಿಗಿಂತ ಮುಂಚೆ ಚಾಲ್ತಿಯಲ್ಲಿದ್ದ ಕರ್ನಾಟಕ ಖಾಸಗಿ ನರ್ಸಿಂಗ್ ಹೋಂ ಅಧಿನಿಯಮ, 1976 ಎಂಬ ಹಳೆ ಕಾನೂನನ್ನು ರದ್ದುಗೊಳಿಸಿ ಅದರ ಬದಲಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಎಂಬ ಕಾನೂನನ್ನು ಜಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಡಬೇಕಾಗಿದ್ದು ಮಾತ್ರವಲ್ಲದೇ ಸರ್ಕಾರವು ಸೂಚಿಸುವ ಎಲ್ಲಾ ಅಗತ್ಯವಾಗಿರುವ ಅಂಶಗಳನ್ನು ಅಂದರೆ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ – 2007 Read More »

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ – 2017

ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಈ ಉದ್ದೇಶದಿಂದ ಸುರಕ್ಷಿತ ರಸ್ತೆಗಳ ನಿರ್ಮಾಣ ಮತ್ತು ವಾಹನಗಳ ಎಂಜಿನಿಯರಿಂಗ್ ಜಾರಿ ಮತ್ತು ಶಿಕ್ಷಣ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಹಾಗೂ ರಸ್ತೆ ಸುರಕ್ಷತಾ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ನಮ್ಮ ರಾಜ್ಯದಲ್ಲಿ “ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ, 2017” ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ. ಈ ಅಧಿನಿಯಮದ ಪ್ರಕಾರ ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದ್ದು

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ – 2017 Read More »

ಮಾಹಿತಿ ಹಕ್ಕು ಅಧಿನಿಯಮ-2005

ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರ ದಾಯಿತ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರಿ ಪ್ರಾಧಿಕಾರಗಳ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಪಡೆಯಲು ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕಿನ ಕಾರ್ಯರೂಪದ ವ್ಯವಸ್ತೆಯನ್ನು ರೂಪಿಸುವುದಕ್ಕಾಗಿ, ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಮತ್ತು ಸರ್ಕಾರಗಳು ಮತ್ತು ಅವುಗಳ ಅಂಗ ಸಂಸ್ಥೆಗಳು ನಾಗರಿಕರಿಗೆ ಜವಾಬ್ದಾರಿಯಾಗಿರುವಂತೆ ಮಾಡಲು ನಾಗರಿಕರಿಗೆ ಸೂಕ್ತ ಮಾಹಿತಿಯನ್ನು ಒದಗಿಸುವುದಕ್ಕಾಗಿ ಮತ್ತು ಪ್ರಜಾಸತ್ತಾತ್ಮಕ ಆದರ್ಶದ ಸಾರ್ವಭೌಮತೆಯನ್ನು ಸಂರಕ್ಷಿಸುವುದರ ಜೊತೆಗೆ ಸಂಘರ್ಷಕ್ಕೊಳಗಾಗುವ ಹಿತಾಸಕ್ತಿಗಳ ನಡುವೆ ಸಾಮರಸ್ಯ ಮೂಡಿಸುವುದಕ್ಕಾಗಿ ಮಾಹಿತಿಯನ್ನು ಪಡೆಯಲಿಚ್ಚಿಸುವ ನಾಗರಿಕರಿಗೆ ಸೂಕ್ತ

ಮಾಹಿತಿ ಹಕ್ಕು ಅಧಿನಿಯಮ-2005 Read More »

error: Content is protected !!
Scroll to Top