ಬೈಲೂರು ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ – ಆಟಿಡೊಂಜಿ ದಿನ

ಕಾರ್ಕಳ : ಬೈಲೂರು ಶ್ರೀ ವಿನಾಯಕ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಶಾಲಿನಿ ಸುಕೇಶ್ ಪೂಜಾರಿ, ಕಾರ್ಕಳ ಸಂಗಮ ಸಂಜೀವಿನಿ ತಾಲೂಕು ಮಟ್ಟದ ಅಧ್ಯಕ್ಷ ರೇವತಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ, ಸಂಜೀವಿನಿ ಸದಸ್ಯೆ ನೀರೆ ಬೈಲೂರಿನ ಮಾಲಿನಿ ಜೆ. ಶೆಟ್ಟಿ, ಜೀವನೋಪಾಯ ಸಮಿತಿಯ ಅಧ್ಯಕ್ಷ ತಸ್ವಿನ್ ಹಾಗೂ ಕಾರ್ಯದರ್ಶಿ ಸರೋಜ ಇವರೆಲ್ಲರೂ ಉಪಸ್ಥಿತರಿದ್ದರು.

ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಸ್ವಾಗತಿಸಿದರು. ಸಂಜೀವಿನಿ ಸದಸ್ಯರಾದ ರತಿ, ರೇವತಿ, ಮಾಲಿನಿ ಆಟಿ ತಿಂಗಳ ಆಹಾರ ಪದಾರ್ಥಗಳು, ಔಷಧಿಗಳು ಹಾಗೂ ಹಿಂದಿನ ಕಾಲದ ಸ್ಥಿತಿಗತಿಗಳ ವಿವರಿಸಿದರು. ಸೌಮ್ಯ ವಂದಿಸಿದರು.

















































































error: Content is protected !!
Scroll to Top