ಸಾಮಾನ್ಯವಾಗಿ ಬೆಕ್ಕು ಪಾತ್ರೆಯಲ್ಲಿರುವ ಹಾಲನ್ನು ತನ್ನ ನಾಲಿಗೆಯಿಂದ ನೆಕ್ಕಿ ನೆಕ್ಕಿ ಕುಡಿಯುತ್ತದೆ. ಆದರೆ, ಇಲ್ಲೊಂದು ಮುದ್ದಾದ ಬೆಕ್ಕು ಮಾತ್ರ ವಿಭಿನ್ನವಾಗಿ ಕೈಯಿಂದಲೇ ಹಾಲು ಕುಡಿದು ಗಮನ ಸೆಳೆದಿದೆ. ಮನುಷ್ಯರು ಕೈಯಲ್ಲಿ ಪಾಯಸವನ್ನು ಸವಿಯುವಂತೆ ನೆಕ್ಕಿದ್ದು, ಬೆಕ್ಕಿನ ಈ ಅಪರೂಪದ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪ್ರಾಣಿಗಳಿಗೂ ಪ್ರೀತಿ, ವಿಶ್ವಾಸ, ಕಾಳಜಿ, ಮತ್ತು ಮಮತೆ ದೊರೆತರೆ ಅವು ಹೇಗೆ ಮಾನವರೊಂದಿಗೆ ಬೆರೆಯುತ್ತವೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ. ಅಂದಹಾಗೆ ಈ ದೃಶ್ಯ ಕಂಡುಬಂದಿದ್ದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮ ಮೂಜುರು ಲೋಕನಾಥ್ ಜೈನ್ ಅವರ ಮನೆಯಲ್ಲಿ. ಅವರ ಪುತ್ರಿ ಜ್ಞಾನಸುಧಾ ಕಾಲೇಜಿನ ಶಿಕ್ಷಕಿ ಕವಿತಾ ಜೈನ್ ಈ ಸುಂದರ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ತನ್ನ ಕೈಯಲ್ಲೇ ಹಾಲು ಕುಡಿದ ಮುದ್ದು ಬೆಕ್ಕು – ವಿಡಿಯೋ ವೈರಲ್



























