ಕಾರ್ಕಳ : ಕಣಜದ ಹುಳು ಕಚ್ಚಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಕಜೆ ಎಂಬಲ್ಲಿ ಸಂಭವಿಸಿದೆ. ಕಲ್ಯಾಣ ಸಪಳಿಗ (68) ಎಂಬವರೇ ಸಾವಿಗೀಡಾದ ಮಹಿಳೆ. ಜು. 12ರ ಮಧ್ಯಾಹ್ನ ಮನೆ ಸಮೀಪ ಅವರ ಮೇಲೆ ಏಕಾಏಕಿ ಕಣಜದ ಹುಳುಗಳು ದಾಳಿ ಮಾಡಿತ್ತು. ಕೂಡಲೇ ಅವರನ್ನು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಕಲ್ಯಾಣ ಅವರು ಕೊನೆಯುಸಿರೆಳೆದರು.
ಕಣಜದ ಹುಳು ಕಚ್ಚಿ ಮಹಿಳೆ ಸಾವು






































































