ತಮಿಳುನಾಡು ಸಿಎಂ ವಿಜಯ್‌ ಭೇಟಿ – ಶುಕ್ರವಾರ ಕೊಲ್ಲೂರಿನಲ್ಲಿ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತರಿಗಿಲ್ಲ ದರ್ಶನ

ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಕ್ರವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ.

ಜೂ. 12ರಂದು ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದಲ್ಲಿ, ದೇವಸ್ಥಾನದ ಸುತ್ತಮುತ್ತಲು ಬಿಗಿ ಬಂದೋಬಸ್ತು ಕಲ್ಪಿಸಲಾಗಿದೆ. ವಿಜಯ್ ದೇವಸ್ಥಾನ ಭೇಟಿ ಬಳಿಕ ಹಿಂತಿರುಗಲಿದ್ದಾರೆ. ಯಾವುದೇ ಸಾರ್ವಜನಿಕ ಭೇಟಿಯ ಕಾರ್ಯಕ್ರಮ ಇಲ್ಲ ಎಂದು ಪೊಲೀಸ್ ಇಲಾಖೆ ನಾಗರಿಕರು ಹಾಗೂ ಭಕ್ತರಿಗೆ ಸೂಚನೆ ನೀಡಿದೆ.

ವಾಹನ ಸಂಚಾರದ ಕಾನ್ವಾಯ್ ಹಾದಿ, ಪ್ರವೇಶ ದ್ವಾರ ಅಥವಾ ದೇವಸ್ಥಾನದ ಆವರಣದಲ್ಲಿ ಗುಂಪು ಸೇರಬಾರದು, ಜನಸಂದಣಿ ಮಾಡಬಾರದು. ವಿಶೇಷ ಬಂದೋಬಸ್ತು ಇರುವುದರಿಂದ ಮಧ್ಯಾಹ್ನ 12ರಿಂದ ಸಂಜೆ 5ರವರೆಗೆ ಭಕ್ತಾದಿಗಳು ದರ್ಶನ ತಪ್ಪಿಸುವುದು ಸೂಕ್ತ. ತಮಿಳುನಾಡು ಸಿಎಂ ಭೇಟಿ ಹಿನ್ನೆಲೆಯಲ್ಲಿ ದರ್ಶನದ ವೇಳೆ ಅನಾನುಕೂಲವಾಗಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.













































\















error: Content is protected !!
Scroll to Top