ಜೂ. 21 : ಯುವ ಸಂಗಮ ಕೌಡೂರು – ಆರೋಗ್ಯ ತಪಾಸಣಾ ಶಿಬಿರ – ಪ್ರತಿಭಾ ಪುರಸ್ಕಾರ

ಕಾರ್ಕಳ : ಯುವ ಸಂಗಮ ಕೌಡೂರು ಇದರ ವತಿಯಿಂದ ಜೂ. 21ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ.
ತಜ್ಞ ವೈದ್ಯರು ಭಾಗಿಯಾಗಲಿದ್ದು, ಉಚಿತವಾಗಿ ಹೃದಯ ತಪಾಸಣೆ, ಮಂಡಿನೋವು, ಚರ್ಮರೋಗ ಹಾಗೂ ಆರೋಗ್ಯ ತಪಾಸಣೆ ನಡೆಯಲಿದೆ. ಶಿಬಿರದಲ್ಲಿ ರಕ್ತಪರೀಕ್ಷೆ ವ್ಯವಸ್ಥೆಯಿದೆ, ಮಧುಮೇಹ ಪರೀಕ್ಷೆ ಮಾಡಿಸುವವರು ಖಾಲಿ ಹೊಟ್ಟೆಯಲ್ಲಿ ಬರಬೇಕು, ಮಂಡಿನೋವು ತಪಾಸಣೆ ಮಾಡುವವರು ಮಧ್ಯಾಹ್ನ 12 ಗಂಟೆಯೊಳಗಡೆ ಪರೀಕ್ಷೆ ಮಾಡಿಸಬೇಕು.

ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 85% ಮೇಲ್ಪಟ್ಟು ಅಂಕಗಳಿಸಿದ ಕೌಡೂರು ಗ್ರಾಮದ ಆಯ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9535544781 ಅಥವಾ 9535829980 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.













































\















error: Content is protected !!
Scroll to Top