ದರ್ಶನ್ ಅರೆಸ್ಟ್ ಆಗಿ ಇಂದಿಗೆ 2 ವರ್ಷ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ (ಜೂ.11) 2 ವರ್ಷ ಆಗಿದೆ.

ಕೊಲೆ ಕೇಸಲ್ಲಿ 2024 ಜೂನ್ 11ರಂದು ಮೈಸೂರಿನಲ್ಲಿ ಹೋಟೆಲ್‌ನಲ್ಲಿದ್ದಾಗಲೇ ಅರೆಸ್ಟ್ ಮಾಡಲಾಗಿತ್ತು. 1 ಬಾರಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಅದಾದ ಬಳಿಕ ಸುಪ್ರೀಂನಲ್ಲಿ ಜಾಮೀನು ರದ್ದಾದ ಹಿನ್ನೆಲೆ ದರ್ಶನ್ ಸೇರಿ 7 ಆರೋಪಿಗಳು ಮತ್ತೆ ಜೈಲುಪಾಲಾಗಿದ್ದಾರೆ.

ಇನ್ನು, ದರ್ಶನ್ ಸಹಚರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳ ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಎ-3 ಪವನ್, ಎ-4 ರಾಘವೇಂದ್ರ, ಎ-5-ನಂದೀಶ್, ಎ-9 ಧನರಾಜು ಹಾಗೂ ಎ-10 ವಿನಯ್ ಸೇರಿ ಜಾಮೀನಿಗಾಗಿ ಅರ್ಜಿ ಸಲ್ಲಿದ್ದರು.



















error: Content is protected !!
Scroll to Top