ಎಸ್ಸೆಸೆಲ್ಸಿ ಫಲಿತಾಂಶ -ಎರಡನೇ ಹಂತದ ಪರೀಕ್ಷೆಯಲ್ಲಿ ವೈಭವ್‌ ಕುಲಾಲ್‌ಗೆ 617 ಅಂಕ

ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ಮಿಯ್ಯಾರು ಮೊರಾರ್ಜಿ ದೇಸಾಯಿ ವಿದ್ಯಾರ್ಥಿ

ಕಾರ್ಕಳ : ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ಹತ್ತನೇ ತರಗತಿಯ ದ್ವಿತೀಯ ಪರೀಕ್ಷೆಯಲ್ಲಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿ ವೈಭವ್ ವಿ. ಆರ್. ಕುಲಾಲ್ 617 ಅಂಕ ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಗಳಿಸಿದ್ದಾರೆ. ಏ. 23ರಂದು ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾದಾಗ ವೈಭವ್ ಕುಲಾಲ್ ಗೆ 610 ಅಂಕ ದೊರಕಿತ್ತು. ಬಳಿಕ ಪುನಃ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಪರೀಕ್ಷೆ ಬರೆದು 617 ಅಂಕ ಗಳಿಸಿದ್ದಾರೆ. ವೈಭವ್ ಪತ್ರಕರ್ತ ವಸಂತ್ ಕುಮಾರ್ ಹಾಗೂ ರೇಖಾ ದಂಪತಿ ಪುತ್ರ.‌







































































error: Content is protected !!
Scroll to Top