ಕಾರ್ಕಳ : ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘವು 2025-26ನೇ ಆರ್ಥಿಕ ಸಾಲಿನಲ್ಲಿ 218.26 ಕೋಟಿ ರೂ. ವ್ಯವಹಾರ ನಡೆಸಿ, 52.10 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ವಾರ್ಷಿಕ ಅಂತ್ಯಕ್ಕೆ ಸಂಘವು 36.69 ಲಕ್ಷ ರೂ. ಪಾಲು ಬಂಡವಾಳ ಹೊಂದಿದ್ದು, 48. 10 ಕೋಟಿ ಠೇವಣಿ ಸಂಗ್ರಹವಾಗಿದೆ. 38.48 ಕೋಟಿ ರೂ. ಸಾಲ ವಿತರಿಸಿದ್ದು, 54.09 ಕೋಟಿ ದುಡಿಮೆ ಬಂಡವಾಳವನ್ನು ಹೊಂದಿರುತ್ತದೆ. ಸಂಘವು ಕುಕ್ಕುಂದೂರಿನ ಜೋಡುರಸ್ತೆಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಕಾರ್ಕಳ ತಾಲೂಕಿನಾದ್ಯಂತ 8 ಶಾಖೆಗಳನ್ನು ಹೊಂದಿದೆ.
ಸಂಘವನ್ನು ಅಭಿವೃದ್ಧಿಯತ್ತ ಸಾಗುವಲ್ಲಿ ಸಹಕರಿಸಿದ ಆಡಳಿತ ಮಂಡಳಿ ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ. ಹನಿದೈನಿಕ ಸಂಗ್ರಾಹಕರಿಗೆ, ಗ್ರಾಹಕ ಮಿತ್ರರಿಗೆ, ಸಂಘದ ಸದಸ್ಯರಿಗೆ, ಇಲಾಖಾಧಿಕಾರಿಯವರಿಗೆ ಸಂಘದ ಪರವಾಗಿ ಸಂಘದ ಅಧ್ಯಕ್ಷ ಸಂತೋಷ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ – 218.26 ಕೋಟಿ ರೂ. ವ್ಯವಹಾರ






































































