ಬೈಲೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಾರ್ಕಳ : ಜಸ್ಟೀಸ್‌ ಕೆ.ಎಸ್.‌ ಹೆಗ್ಡೆ ಚಾರಿಟೇಬಲ್‌ ಟ್ರಸ್ಟ್‌ ದೇರಳಕಟ್ಟೆ ಮಂಗಳೂರು ಹಾಗೂ ನೀರೆ ಬೈಲೂರು ಲಯನ್ಸ್‌ ಕ್ಲಬ್‌ ಅವರ ಜಂಟಿ ಆಶ್ರಯದಲ್ಲಿ ಮಾ. 15ರಂದು ಬೈಲೂರು ಪಳ್ಳಿಕ್ರಾಸ್‌ನ ಕೆ.ಎಸ್.‌ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ವೈದ್ಯ, ಬೈಲೂರು ಪಳ್ಳಿಕ್ರಾಸ್‌ ಕೆ.ಎಸ್.‌ಹೆಗ್ಡೆ ಆಸ್ಪತ್ರೆಯ ಆಡಳಿತಾಧಿಕಾರಿ ದಿನೇಶ್ಚಂದ್ರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ನೀರೆ ಬೈಲೂರು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಶೆಟ್ಟಿ ಗುತ್ತುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ವೈಸ್‌ ಪ್ರೆಸಿಡೆಂಟ್‌ ಸತೀಶ್‌ ಭಂಡಾರಿ, ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕ ಯೋಗೀಶ್‌ ಹೆಗ್ಡೆ, ಕಾರ್ಕಳ ಗಾಜ್ರಿಯಾ ಆಸ್ಪತ್ರೆಯ ಮೆಡಿಕಲ್‌ ಡೈರೆಕ್ಟರ್‌ ಸಚ್ಚಿದಾನಂದ ಪ್ರಭು, ಬೈಲೂರು ಕೆ.ಎಸ್.‌ಹೆಗ್ಡೆ ಆಸ್ಪತ್ರೆ ಮೆಡಿಕಲ್‌ ಆಫೀಸರ್‌ ಡಾ. ನಿಯತಿ ರೈ, ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್‌ ಶೆಟ್ಟಿ, ವಲಯಾಧ್ಯಕ್ಷ ಸತೀಶ್‌ ಶೆಟ್ಟಿ, ಕೋಶಾಧಿಕಾರಿ ರಾಜೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ವಕೀಲ ಸದಾನಂದ ಸಾಲಿಯಾನ್‌ ಸ್ವಾಗತಿಸಿ, ಉದಯ್‌ ಕುಮಾರ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.















































































error: Content is protected !!
Scroll to Top