ಬೆಳುವಾಯಿ : ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ – ಪಿಕಪ್‌ ಚಾಲಕ ಸಾವು

ಕಾರ್ಕಳ : ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಪಿಕಪ್‌ ವಾಹನ ಚಾಲಕ ಮೃತಪಟ್ಟ ದುರ್ಘಟನೆ ಮಾ. 16ರಂದು ಬೆಳುವಾಯಿಯಲ್ಲಿ ಸಂಭವಿಸಿದೆ.

ಭಟ್ಕಳ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಕೆಎ31ಎಫ್1445 ನಂಬ್ರದ ಬಸ್ ಚಾಲಕ ಬೆಳುವಾಯಿ ಫ್ಲೈ ಓವರ್‌ನಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಎದುರಿನಿಂದ ಬರುತ್ತಿದ್ದ ಪಿಕಪ್‌ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪಿಕಪ್‌ ಚಾಲಕ ಸಾವನಪ್ಪಿದ್ದಾರೆ. ಚಾಲಕ ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಪಿಕಪ್‌ನಲ್ಲಿದ್ದ ಇನ್ನೋರ್ವ ಪ್ರಯಾಣಿಕ ಗಾಯಗೊಂಡಿದ್ದು, ಬಸ್‌ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.





























































































































error: Content is protected !!
Scroll to Top