ಕಾರ್ಕಳ : ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ನೀರೆ ಬೈಲೂರು ಇವರ ಜಂಟಿ ಆಶ್ರಯದಲ್ಲಿ ಮಾ. 15ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಬೈಲೂರು ಪಳ್ಳಿಕ್ರಾಸ್ ಸಮೀಪದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಿವಿ, ಮೂಗು, ಗಂಟಲು, ಪ್ರಸೂತಿ ಮತ್ತು ಸ್ತ್ರೀ ರೋಗ, ಚರ್ಮರೋಗ, ಮೂಳೆ, ಕಣ್ಣು ಮತ್ತು ಮಕ್ಕಳ ತಜ್ಞರು ಭಾಗಿಯಾಗಲಿದ್ದಾರೆ. ಇನ್ನು ಲಯನ್ಸ್ ಕ್ಲಬ್ ನೀರೆ ಬೈಲೂರು ಇವರಿಂದ ಉಚಿತ ಕನ್ನಡಕ ವಿತರಣೆ ವ್ಯವಸ್ಥೆಯಿದೆ. ವೈದ್ಯರ ಸಲಹೆ ಮೇರೆಗೆ ರಕ್ತಪರೀಕ್ಷೆ ಹಾಗೂ ECG ಉಚಿತವಾಗಿ ಮಾಡಿಕೊಡಲಾಗುವುದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು, ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಡಾ.ಜೆ. ದಿನೇಶ್ಚಂದ್ರ ಹೆಗ್ಡೆ [9740083233], ಸದಾನಂದ ಸಾಲಿಯಾನ್ [9880657904], ಡಾ. ಶಶಿಕಿರಣ್ [9480121840] ಪ್ರದೀಪ್ [8197022732] ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















