ಕಾರ್ಕಳ : ಕಳೆದ ಶನಿವಾರಕ್ಕೆ ಹೋಲಿಸಿದರೆ ಕಾರ್ಕಳ ಮಾರುಕಟ್ಟೆಯಲ್ಲಿ ಇಂದು ತರಕಾರಿ ಮತ್ತು ಮೀನಿನ ದರದಲ್ಲಿ ಏರಿಕೆ ಕಂಡಿದೆ. ಬಿಸಿಲಿನ ಹೆಚ್ಚಳದಿಂದ ತರಕಾರಿ ಇಳುವರಿ ಕಡಿಮೆಯಾಗಿರುವುದು ತರಕಾರಿ ದರ ಏರಿಕೆಗೆ ಒಂದು ಕಾರಣವಾದರೆ ಇನ್ನು ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳು ಹೆಚ್ಚಿರುವ ಕಾರಣ ತರಕಾರಿಗೆ ಬೇಡಿಕೆ ಹೆಚ್ಚಿದ್ದು ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 100-120 ರೂ., ಮುಳ್ಳುಸೌತೆ : 50-60ರೂ., ಶುಂಠಿ : 80ರೂ., ಟೊಮ್ಯಾಟೋ : 30 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 25 ರೂ., ಬೀನ್ಸ್ : 80 -100ರೂ., ಕಾಯಿಮೆಣಸು :80-100 ರೂ., ಕ್ಯಾರೆಟ್ : 50 ರೂ., ಬೀಟ್ರೋಟ್ :30 ರೂ., ಕ್ಯಾಬೇಜ್ :25ರೂ., ಹೂಕೋಸು :35-40 ರೂ., ನವಿಲು ಕೋಸು -40 ರೂ., ಬೆಂಡೆ : 60 ರೂ., ಕುಂಬಳಕಾಯಿ :30 ರೂ., ಅಲಸಂಡೆ : 80-90 ರೂ., ತೊಂಡೆಕಾಯಿ :80ರೂ., ( ಘಾಟಿ 50 ರೂ.) ಹಾಗಲಕಾಯಿ : 70 ರೂ., ಗೆಣಸು : 30ರೂ., ಲಿಂಬೆ : 160-200 ರೂ., ಮೂಲಂಗಿ :40-50 ರೂ., ದೊಣ್ಣೆಮೆಣಸು : 70 ರೂ., ಉದ್ದ ಮೆಣಸು : 80-90 ರೂ., ಬದನೆ : 40 ರೂ., ಗುಳ್ಳ : 60 ರೂ., ಮಟ್ಟಿ ಗುಳ್ಳ – 100 ರೂ. ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ : 50 ರೂ., ಘಾಟಿ ಹೀರೆ : 60 (ಊರಿನ ಹೀರೆ -80) ರೂ.,
ಮೀನಿನ ದರ ಕೆ. ಜಿ. ಗೆ
ಅಂಜಲ್ – 1,100 ರೂ., (ಸಣ್ಣದು-600) ಕೊಡ್ಡಾಯಿ : 300ರೂ., ಬಂಗುಡೆ – 350ರೂ., (ಸಣ್ಣದು – 250ರೂ.) ಬೂತಾಯಿ : 200ರೂ., (ಸಣ್ಣದು-150) ನಂಗ್ – 400ರೂ., ಮುರು -250 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 300ರೂ., ಬೊಳ್ಳೆಂಜೀರ್ : 300 ರೂ., ಸಿಗಡಿ – 400ರೂ., ಅಡೆಮೀನು – 400 ರೂ., ಕಾಣೆ (ಲೇಡಿ ಫಿಶ್) – 700 ರೂ., ಪಾಪ್ಲೆಟ್ (Balck) – 1000 ರೂ., ವೈಟ್ ಪಾಪ್ಲೆಟ್- 1500 ರೂ., ಕುಟ್ಯಂಜಲ್ (ಟುನಾ) – 200 ರೂ., ಬೆರೆಕೆ – 200 ರೂ., ತೇಡೆ – 200, ಕಾಂಡಾಯಿ – 250 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 120-240 ರೂ., ದಾಳಿಂಬೆ : 240ರೂ., ದ್ರಾಕ್ಷಿ : 120 -160 ರೂ., ಕಲ್ಲಂಗಡಿ : 40 ರೂ., ಬಾಳೆ : 80-100ರೂ., ಕಿತ್ತಳೆ : 80-100 ರೂ., ಮೂಸಂಬಿ : 80 ರೂ., ಸೀತಾಫಲ – 120-140 ರೂ., ಡ್ರಾಗ್ಯನ್ ಫ್ರುಟ್ : 200ರೂ., ಪಪ್ಪಾಯ – 50 ರೂ., ಚಿಕ್ಕು – 80 ರೂ.
ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 280 ರೂ., ಬಾಯ್ಲರ್ : 230 ರೂ. (ಸ್ಕಿನ್ ಔಟ್ -260 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7.5 ರೂ.








































































