ಕಾರ್ಕಳ : ಶ್ರೀ ಪದ್ಮಾವತಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ ಮಾ. 8ರ ಭಾನುವಾರ ಕಾಲ್ನಡಿಗೆ ಜಾಥಾ ನಡೆಯಲಿದೆ. ಅಂದು ಮುಂಜಾನೆ 6.15 ಗಂಟೆಗೆ ಕಾರ್ಕಳ ಸ್ವರಾಜ ಮೈದಾನದಿಂದ ಹೊರಡುವ ಜಾಥಾವು ಅನಂತಶಯನ ಮುಖ್ಯರಸ್ತೆಯಾಗಿ ವೆಂಕಟರಮಣ ದೇವಸ್ಥಾನ, ಸ್ಟೇಟ್ ಬ್ಯಾಂಕ್ ಸಮೀಪವಾಗಿ ಗಾಂಧಿ ಮೈದಾನ, ಆನೆಕೆರೆ ಸರ್ಕಲ್, ಗೋಮಟೇಶ್ವರ ಬೆಟ್ಟದ ಮಾರ್ಗವಾಗಿ ಬಾಹುಬಲಿ ಹಾಲ್, ಫಿಷರೀಸ್ ದಾರಿಯಲ್ಲಿ ಮತ್ತೆ ಸ್ವರಾಜ್ ಮೈದಾನಕ್ಕೆ ತಲುಪಲಿದೆ. ನಿಯಮ ಪಾಲನೆಯೊಂದಿಗೆ 5 ಕಿ.ಮೀ. ಮೊದಲು ಕ್ರಮಿಸಿದ ಮೂವರಿಗೆ ಬಹುಮಾನ ನೀಡಲಾಗುವುದು. 18 ವರ್ಷ ಮೇಲ್ಪಟ ಯುವತಿಯರು ಹಾಗೂ ಮಹಿಳೆಯರು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಬಹುದಾಗಿದೆ ಎಂದು ಶ್ರೀ ಪದ್ಮಾವತಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರಶ್ಮಿ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ – 9901637747 ನಂಬರ್ ಸಂಪರ್ಕಿಸಬಹುದಾಗಿದೆ.
ಮಾ. 8 : ಕಾರ್ಕಳದಲ್ಲಿ ಕಾಲ್ನಡಿಗೆ ಜಾಥಾ









































