ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ನಮ್ಮ ದೇಶದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವ ಮೂಲಕ ಇತ್ಯರ್ಥಪಡಿಸಿ ತೀರ್ಪು ನೀಡುವ ಉದ್ದೇಶಕ್ಕಾಗಿ 2017ರಲ್ಲಿ ಕೇಂದ್ರ ಸರಕಾರವು ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಈ ವಿಶೇಷ ನ್ಯಾಯಾಲಯಗಳ ಕಾರ್ಯಕ್ಷಮತೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಪ್ರಭಾವಶಾಲಿ ರಾಜಕಾರಣಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ವೇಗವಾಗಿ ಮುಗಿಸಿ ಜನಸಾಮಾನ್ಯರು ನ್ಯಾಯಾಂಗದ ಬಗ್ಗೆ ಹೊಂದಿರುವ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ, ಜನಸಾಮಾನ್ಯರಿಗೆ ತಮ್ಮ ರಾಜಕೀಯ ಪ್ರತಿನಿಧಿಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಲಭಿಸುವಂತೆ ನೋಡಿಕೊಳ್ಳವ ಉದ್ದೇಶದಿಂದ ಮತ್ತು ಅಪರಾಧದ ಅರೋಪವನ್ನು ಹೊಂದಿರುವ ಜನ ಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಮುಂದುವರಿಸದಂತೆ ಕ್ರಮಕೈಗೊಳ್ಳುವ ಉದ್ದೇಶದಿಂದ ಈ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳನ್ನು ದೇಶದ ಪ್ರತಿ ರಾಜ್ಯದಲ್ಲಿ ಸ್ಥಾಪಿಸಲಾಗಿದೆ.

ಈ ಕಾನೂನು ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುತ್ತದೆ. ಈ ಕಾನೂನಿಗೆ ಸಂಬಂಧಪಟ್ಟ ಪ್ರಕರಣಗಳ ಪ್ರಗತಿ ಬಗ್ಗೆ ಸೂಕ್ತ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಬೇಕಾಗಿರುತ್ತದೆ. ಇದಲ್ಲದೆ ನಮ್ಮ ದೇಶದ ಸಂಸತ್ತಿನ ಸದನಗಳಿಗೆ ಮತ್ತು ಪ್ರತಿಯೊಂದು ರಾಜ್ಯದ ವಿಧಾನ ಮಂಡಲದ ಸದನಗಳಿಗೆ ಚುನಾವಣೆಯನ್ನು ನಡೆಸುವ ಬಗ್ಗೆ ಮತ್ತು ಆ ಸದನಗಳ ಸದಸ್ಯತ್ವದ ಅರ್ಹತೆಗಳ ಮತ್ತು ಅನರ್ಹತೆಗಳನ್ನು ನಿರ್ಧರಿಸುವ ಬಗ್ಗೆ, ಸಾರ್ವಜನಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿನ ಚುನಾವಣೆಗೆ ಸಂಬಂಧಪಟ್ಟಂತೆ ಭ್ರಷ್ಟ ಆಚರಣೆಗಳನ್ನು ಮತ್ತು ಇತರ ಅಪರಾಧಗಳನ್ನು ನಿಯಂತ್ರಿಸುವ ಹಾಗೂ ಅಂತಹ ಚುನಾವಣೆಗಳ ಸಂದರ್ಭದಲ್ಲಿ ಉದ್ಭವಿಸುವ ಸಂದೇಹಗಳನ್ನು ಮತ್ತು ವಿವಾದಗಳನ್ನು ತೀರ್ಮಾನಿಸುವ ಬಗ್ಗೆ ಜನತಾ ಪ್ರಾತಿನಿಧ್ಯ ಅಧಿನಿಯಮ 1951 ಎಂಬ ಕಾನೂನು ನಮ್ಮ ದೇಶದಲ್ಲಿ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಪ್ರತಿಯೊಬ್ಬ ಜನಪ್ರತಿನಿಧಿಯು ಕಡ್ಡಾಯವಾಗಿ ತನ್ನ ಅಧಿಕಾರವನ್ನು ವಹಿಸಿಕೊಂಡ ನಂತರ ನಿಗದಿತ ಅವಧಿಯ ಒಳಗಾಗಿ ತನ್ನ ಹಾಗೂ ತನ್ನ ಪತ್ನಿ ಮತ್ತು ಅವಲಂಬಿತ ಮಕ್ಕಳು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಹೊಂದಿರುವ ಚರ ಮತ್ತು ಸ್ಥಿರ ಸ್ವತ್ತುಗಳ ವಿವರ, ಯಾವುದೇ ಸಾರ್ವಜನಿಕ ಹಣಕಾಸು ಸಂಸ್ಥೆಗೆ ಸಂಬಂಧಿಸಿದ ಆತನು ಹೊಣೆಗಾರಿಕೆಗಳು ಇತ್ಯಾದಿ ಮಾಹಿತಿಗಳನ್ನು ಸಂಧರ್ಭಕ್ಕೆ ಅನುಗುಣವಾಗಿ ಲೋಕಸಭೆಯ ರಾಜ್ಯ ಸಭೆಯ ಅಥವಾ ವಿಧಾನಸಭೆಯ ಅಧ್ಯಕ್ಷರಿಗೆ ಸಲ್ಲಿಸಬೇಕಾಗಿರುತ್ತದೆ. ಅದೇ ಪ್ರಕಾರ ಚುನಾವಣಾ ಸಂದರ್ಭದಲ್ಲಿ ಸಮಾಜದ ವಿವಿದ ಧರ್ಮ, ಮೂಲವಂಶ, ಜಾತಿ, ಸಮುದಾಯ ಅಥವಾ ಭಾಷೆ ಇವುಗಳ ಆಧಾರದ ಮೇಲೆ ಭಾರತದ ನಾಗರಿಕರ ಭಿನ್ನ ಭಿನ್ನ ವರ್ಗಗಳ ನಡುವೆ ಹಗೆತನ ಅಥವಾ ದ್ವೇಷ ಭಾವನೆಗಳನ್ನು ಬೆಳೆಸುವ ಅಥವಾ ಬೆಳೆಸಲು ಪ್ರಯತಿಸುವ ಯಾವನೇ ಜನಪ್ರತಿನಿಧಿಯು ಈ ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಜೈಲುಶಿಕ್ಷೆ, ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.































































































error: Content is protected !!
Scroll to Top