ವಿವಿಧ ಸಮಸ್ಯೆ ಬಗೆಹರಿಸುವಂತೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಯವರಿಗೆ ಮನವಿ

ಬೆಂಗಳೂರು : ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ಫೆ. 27ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿತು.

ರಾಜ್ಯಾಧ್ಯಕ್ಷ ಜಿ. ಎಂ. ರಾಜಶೇಖರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಘ ರಾಜ್ಯ ಸರಕಾರದಿಂದ ನಗರ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಸರಕಾರ ನೀಡಿದರೂ ಸಂಬಂಧ ಪಟ್ಟ ಇಲಾಖೆಯ ಮಾನ ದಂಡದಿಂದ ನೈಜ ಪತ್ರಕರ್ತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ವಾರ್ತಾ ಅಧಿಕಾರಿಗಳಿಂದ ಮಾಹಿತಿ ಪಡೆದು ವಂಚಿತರಿಗೆ ಸೌಲಭ್ಯ ಒದಗಿಸುವಂತೆ, ಮಾಧ್ಯಮ ಪಟ್ಟಿಗೆ ಸೇರ್ಪಡೆ ಕುರಿತಂತೆ ಕೆಲವು ನಿಲುವುಗಳನ್ನು ಸಡಿಲಗೊಳಿಸುವಂತೆ ಮತ್ತು ಬಾಕಿಯಿರುವ ಪತ್ರಕರ್ತರ ನಿವೃತ್ತಿ ವೇತನ ಅರ್ಜಿಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಾಯಿಸಿತು ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪತ್ರಕರ್ತರಿಗೆ ಪೂರಕವಾಗಿರುವ ಇಲಾಖೆಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ಇನ್ನಿತರ ಸರಕಾರಿ ಕಾರ್ಯಕ್ರಮಗಳ ಸುದ್ದಿಗೆ ತೆರಳಲು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಹನದ ಕೊರತೆಯಿದ್ದು ಈ ಸೌಲಭ್ಯ ನೀಡುವಂತೆ ಹಾಗೂ ಪತ್ರಿಕೋದ್ಯಮ ಕುರಿತಂತೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸುವಂತೆ ಬೇಡಿಕೆ ಇಡಲಾಯಿತು.
ಈ ಸಂದರ್ಭ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಟಿ. ಪಿ. ಕೃಷ್ಣನ್, ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್, ಕೋಶಾಧಿಕಾರಿ ಮಂಜುನಾಥ್, ಸಮಿತಿ ಸದಸ್ಯ ಚಂದ್ರಶೇಖರ ಹಾಲಪ್ಪ ಉಪಸ್ಥಿತರಿದ್ದರು.































































































error: Content is protected !!
Scroll to Top