ಉದ್ಯಮದಿಂದ ಸಮಾಜದ ಅಭಿವೃದ್ಧಿ – ಡಾ. ಎಂ. ವೀರಪ್ಪ ಮೊಯ್ಲಿ
ಕಾರ್ಕಳ : ಶಿಕ್ಷಣ ಸಂಸ್ಥೆ ಸ್ಥಾಪನೆ, ಉದ್ಯಮ, ವ್ಯಾಪಾರ ವಹಿವಾಟಿನಿಂದ ಆರ್ಥಿಕತೆಗೆ ವೇಗ ದೊರೆತು ಸಮಾಜ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವುದು ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.
ಅವರು ಜೋಡುರಸ್ತೆಯಲ್ಲಿರುವ ಕಾರ್ಲ ಸಿಟಿ ಸೆಂಟರ್‌ನಲ್ಲಿ ಮಾನಸ ಕಂಫರ್ಟ್ಸ್ ಲಾಡ್ಜಿಂಗ್ ಬೋರ್ಡಿಂಗ್ ಉದ್ಘಾಟಿಸಿ ಮಾತನಾಡಿದರು.
ಕ್ರಿಯೇಟಿವ್ ಸಂಸ್ಥಾಪಕ ಗಣನಾಥ್ ಶೆಟ್ಟಿ ಮಾತನಾಡಿ, ಮಧುರಾಜ್ ಶೆಟ್ಟಿ, ನವೀನ್ ದೇವಾಡಿಗ, ಶಾಕಿರ್ ಅವರ ಪಾಲುದಾರಿಕೆಯಲ್ಲಿ ಮಾನಸ ಲಾಡ್ಜಿಂಗ್, ಬೋರ್ಡಿಂಗ್ ನಿರ್ಮಾಣವಾಗಿದೆ. ಅಭಿವೃದ್ದಿ ಹೊಂದುತ್ತಿರುವ ಕಾರ್ಕಳಕ್ಕೆ ಇಂತಹ ವಸತಿ ಗೃಹಗಳ ಅವಶ್ಯಕತೆಯಿತ್ತು ಎಂದರು.

ಸೇವಾ ಕಾರ್ಯ
ಮಾನಸ ಕಂಫರ್ಟ್ ಸಂಸ್ಥೆ ವತಿಯಿಂದ ಕಾರ್ಕಳ ಮೈನ್ ಶಾಲೆಗೆ ಬಣ್ಣ ಬಳಿಯಲು ಆರ್ಥಿಕ ಸಹಕಾರ, ಪೊಲೀಸ್ ಸ್ಟೇಷನ್‌ಗೆ 8 ಬ್ಯಾರಿಕೇಡ್ ನೀಡಲಾಯಿತು.
ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಡಾ. ಎಂ. ವೀರಪ್ಪ ಮೊಯ್ಲಿಯವರನ್ನು ಮಾನಸ ಕಂಫರ್ಟ್ಸ್ ಪಾಲುದಾರರು ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಿದರು.
ಸನ್ಮಾನ
ಕುಕ್ಕುಂದೂರು ಗ್ರಾ.ಪಂ.ನ 9 ಮಂದಿ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ, ವಿಜೇತ ವಿಶೇಷ ಶಾಲೆಯ ಕಾರ್ಯದರ್ಶಿ ಹರೀಶ್ ಶೆಟ್ಟಿ, ಅಹಿಂಸಾ ಎನಿಮಲ್ ಕೇರ್‌ನ ಸಂಚಾಲಕ ವೀರು ಬಜಗೋಳಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ನ್ಯಾಯವಾದಿಗಳಾದ ಶೇಖರ್ ಮಡಿವಾಳ್, ಮಣಿರಾಜ್ ಶೆಟ್ಟಿ, ಹರಿ ಮೊಗೆರಾಯ, ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷೆ ಉಷಾ ಕೆ., ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಉದ್ಯಮಿಗಳಾದ ಸಂತೋಷ್ ಡಿʼಸಿಲ್ವಾ, ಪ್ರಕಾಶ್ ಆಚಾರ್ಯ, ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪುರಸಭಾ ಸದಸ್ಯ ಅಸ್ಪಕ್ ಅಹಮ್ಮದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.










