ನಿವೃತ್ತ ಶಿಕ್ಷಕ ಪ್ರಕಾಶ್ ಎ‌‌‌. ಕೊಟ್ಯಾನ್‌ರಿಗೆ ಅಭಿನಂದನೆ

ಕಾರ್ಕಳ : 28 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿ ನಿವೃತ್ತಿಗೊಂಡಿರುವ ಶ್ರೀ ಕಾಂತೇಶ್ವರ ಪ್ರೌಢಶಾಲೆ ಶಿಕ್ಷಕ ಪ್ರಕಾಶ್ ಎ. ಕೋಟ್ಯಾನ್ ಅವರಿಗೆ ಶಾಲಾ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದನಾ ಸಭೆಯು ಫೆ. 4ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಶ್ರೀ ಕಾಂತೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಾರಾಡಿಬೀಡು ಡಾ. ಜೀವಂಧರ್ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಆಶಾ ಪ್ರಕಾಶ್ ಕೊಟ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.
ಶ್ರೀ ಕಾಂತೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಘುನಾಥ ಶೆಟ್ಟಿ, ಸಂಚಾಲಕ ರಂಜಿತ್ ಶೆಟ್ಟಿ, ಸದಸ್ಯರಾದ ಜಯೇಶ್ ಬಲ್ಲಾಳ್, ಶ್ರೀಪತಿ ರಾವ್, ಧರ್ಮರಾಜ ಕಂಬಳಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ರೇಶ್ಮಾ, ಶಾಲಾ ಶಿಕ್ಷಕರಾದ ರೇಖಾ, ರಮ್ಯ, ಭವಾನಿ, ರಾಜೇಶ್ ಭಟ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿದರು. ರೇಖಾ ಕಾರ್ಯಕ್ರಮ ನಿರೂಪಿಸಿ, ರಾಜೇಶ್ ಭಟ್ ವಂದಿಸಿದರು.

















































































































































































error: Content is protected !!
Scroll to Top