ಜ. 25 -30 : ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ – ದಾರಗ ಆದಿ ಆಲಡೆ ಕ್ಷೇತ್ರ ಸಪ್ತಮ ವಾರ್ಷಿಕ ಉತ್ಸವ

ಕಾರ್ಕಳ : ತೆಳ್ಳಾರು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗ-ದಾರಗ ಆದಿ ಆಲಡೆ ಕ್ಷೇತ್ರದ ಸಪ್ತಮ ವಾರ್ಷಿಕ ಉತ್ಸವ ಜ. 25ರಿಂದ 30 ರವರೆಗೆ ನಡೆಯಲಿದೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕೆ. ರಾಜೇಶ್‌ ನಡ್ಯಂತಿಲ್ಲಾಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಜ. 25
ಸಾಯಂಕಾಲ 6 ಗಂಟೆಯಿಂದ ಸ್ವಸ್ತಿ ಪುಣ್ಯಾಹವಾಚನ, ರಾಕೋಘ್ನ ಹೋಮ, ಅಂಕುರಾರೋಪಣ, ಶ್ರೀ ದೇವರಿಗೆ ರಾತ್ರಿ ಮಹಾಪೂಜೆ.

ಜ. 26
ಶ್ರೀ ದೇವರಿಗೆ ದೇವತಾ ಪ್ರಾರ್ಥನೆ, ಪುಣ್ಯಾಹವಾಚನೆ, ತೋರಣ ಮುಹೂರ್ತ, ನವ ಕಲಶ, ಪರಿವಾರ ದೇವರುಗಳಿಗೆ ಕಲಶ, ಶ್ರೀ ದೇವರಿಗೆ ಪಂಚಾಮೃತ ಸಹಿತ ಕಲಶಾಭಿಷೇಕ ಮಹಾಪೂಜೆ, ಧ್ವಜಾರೋಹಣ, ಅನ್ನಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಹೂವಿನ ಪೂಜೆ, ಉತ್ಸವ ಬಲಿ, ಶ್ರೀ ದೇವರಿಗೆ ಮಹಾಪೂಜೆ, 6.30ಕ್ಕೆ ಮಹಾರಂಗಪೂಜೆ ಮತ್ತು ಭೂತಬಲಿ.

ಜ. 27 – ಆಥರ್ವ ಶೀರ್ಷ ಮಹಾಯಾಗ
ಬೆಳಿಗ್ಗೆ ಗಂಟೆ 4.30ಕ್ಕೆ ಪುಣ್ಯಾಹವಾಚನ, ನವಕ ಕಲಶ ಪ್ರಧಾನ ಹೋಮ, 9 ಗಂಟೆಗೆ ಆಥರ್ವ ಶೀರ್ಷ ಮಹಾಯಾಗ, ಪಂಚಾಮೃತ ಸಹಿತ ಕಲಶಾಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6 ಗಂಟೆಗೆ ಹೂವಿನ ಪೂಜೆ. ರಾತ್ರಿ 8 ಗಂಟೆಯವರೆಗೆ ಉತ್ಸವ ಬಲಿ, ಶ್ರೀದೇವರಿಗೆ ಮಹಾಪೂಜೆ ಮತ್ತು ಭೂತಬಲಿ, ವಿಶೇಷ ಪಲ್ಲಕಿ ಉತ್ಸವ.

ಜ. 28
ಬೆಳಿಗ್ಗೆ ಪುಣ್ಯಾಹವಾಚನ, ನವಕ ಕಲಶ ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ಬೆಳಿಗ್ಗೆ 9 ಗಂಟೆಗೆ ಸಹಸ್ರ ಕದಳೀಯಾಗ, ಮಧ್ಯಾಹ್ನ ಪಲ್ಲ ಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಾಯಂಕಾಲ 6 ಗಂಟೆಗೆ ಹೂವಿನ ಪೂಜೆ, ರಾತ್ರಿ 8 ಗಂಟೆಯವರೆಗೆ ಉತ್ಸವ ಬಲಿ, ಆಲಡೆ ಕ್ಷೇತ್ರದಲ್ಲಿ ಅಬ್ಬಗ-ದಾರಗ ಸಹಿತ ಕುಮಾರ ದರ್ಶನ ಸೇವೆ, ರಾತ್ರಿ ಶ್ರೀ ದೇವರಿಗೆ ವಿಶೇಷ ಭೂತಬಲಿ, ಕವಾಟ ಬಂಧನ.

ಜ. 29
ಬೆಳಿಗ್ಗೆ ಪುಣ್ಯಾಹವಾಚನ, ಗೋಪೂಜೆ, ಮುಖದಾನ, 8 ಗಂಟೆಗೆ ಕವಾಟೋದ್ಘಾಟನೆ, ವಿಶೇಷ ಪಂಚಾಮೃತ, ಕಲಶಾಭಿಷೇಕ, ಪ್ರಸನ್ನ ಪೂಜೆ, ತುಲಾಭಾರ ಸೇವೆ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಅವಸೃತ ಬಲಿ, ಮಹಾಪೂಜೆ, ಪಲ್ಲಪೂಜೆ, ಫಲಾಹಾರ, ಸಾಯಂಕಾಲ 4 ಗಂಟೆಗೆ ಹೂವಿನ ಪೂಜೆ. 4.30ಕ್ಕೆ ಉತ್ಸವ ಬಲಿ, ತೀರ್ಥಸ್ನಾನ, ತೂಟೆಧಾರಣೆ, ಜಳಕದ ಬಲಿ, ಧ್ವಜಾವರೋಹಣ. ರಾತ್ರಿ 8ಗಂಟೆಗೆ ಫಲಾಹಾರ, ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿರುವುದು.

ಜ. 30
ಬೆಳಿಗ್ಗೆ ಪುಣ್ಯಾಹವಾಚನ, ನವಕ ಕಲಶ ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಸಂಪ್ರೋಕ್ಷಣೆ ನಡೆಯಲಿದೆ

ಭಜನ್‌ ಸಂಧ್ಯಾ
ಜ. 28ರಂದು ಸಂಜೆ 5 ಗಂಟೆಯಿಂದ ಗ್ವಾಲಿಯರ್‌ ಮತ್ತು ಕಿರಾನಾ ಘರಾನಾಗಳ ಹಿಂದೂಸ್ತಾನಿ ಶಾಸ್ತ್ರೀಯ ಪ್ರಸಿದ್ಧ ಗಾಯಕ ಪದ್ಮಶ್ರೀ ಪಂಡಿತ್‌ ಎಂ. ವೆಂಕಟೇಶ್‌ ಕುಮಾರ್‌ ಇವರಿಂದ ಭಜನ್‌ ಸಂಧ್ಯಾ – ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



























































































error: Content is protected !!
Scroll to Top