ಜ. 11 : ಅಡಿಕೆ-ಕೋಕೋ ಬೆಳೆಗಳ ವಿಚಾರ ಸಂಕಿರಣ : ಹವಾಮಾನ ಆಧಾರಿತ ಕೃಷಿ-ರೈತ ಜಾಗೃತಿ ಕಾರ್ಯಕ್ರಮ

ಕಾರ್ಕಳ : ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಇತರೇ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ ಹಾಗೂ ಹವಾಮಾನ ಆಧಾರಿತ ಕೃಷಿ – ರೈತ ಜಾಗೃತಿ ಕಾರ್ಯಕ್ರಮ ಜ. 11ರಂದು ಗುರುಕೃಪಾ ಪಿ.ಯು. ಕಾಲೇಜು ಸಭಾಭವನ ಬಲ್ಯೊಟ್ಟು ಹೊಸ್ಮಾರು ಇಲ್ಲಿ ಬೆಳಿಗ್ಗೆ 9:30ರಿಂದ ನಡೆಯಲಿದೆ.

ಶಾಸಕರಾದ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈದು ಗ್ರಾ. ಪಂ. ಅಧ್ಯಕ್ಷ ಸದಾನಂದ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಚಾಯತ್‌ ಉಪಾಧ್ಯಕ್ಷೆ ಸುಜಾತ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಆಂಟೋನಿ ಡಿಸೋಜ, ಉಡುಪಿ ಜಿ. ಪಂ. ತೋಟಗಾರಿಕೆ ಇಲಾಖಾ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ ಬಿ., ಬ್ರಹ್ಮಾವರ ಡಿಪ್ಲೋಮ ಕೃಷಿ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ಕೆ. ವಿ. ಸುಧೀರ್ ಕಾಮತ್, ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಪಿ.ಯು. ಕಾಲೇಜು ಪ್ರಾಂಶುಪಾಲ ಕೆ.ವಿ. ರೋಹಿತ್, ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಹಾಗೂ ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ

ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ರೇವಣ್ಣ ರೇವಣ್ಣವರ್ (ಕೀಟಶಾಸ್ತ್ರ), ಸಹಾಯಕ ಪ್ರಾಧ್ಯಾಪಕ ಡಾ. ಚೈತನ್ಯ ಎಚ್.ಎಸ್. (ತೋಟಗಾರಿಕೆ), ಶೃಂಗೇರಿ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಸಂಜೀವ ಜಕಾತಿಮಠ (ಸಸ್ಯರೋಗ ಶಾಸ್ತ್ರ), ಜಿ.ಕೆ.ಎಂ.ಎಸ್. ಬ್ರಹ್ಮಾವರ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ.ಎಂ. ಭಾಗವಹಿಸಲಿದ್ದಾರೆ. ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಬಿ.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































































































































































error: Content is protected !!
Scroll to Top