ಕಡಂಬರ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ

ಕಾರ್ಕಳ : ಕಂಬಳದ ಬೀಷ್ಮ ಎಂದೇ ಕರೆಯಲ್ಪಡುವ ಗುಣಪಾಲ ಕಡಂಬರಿಗೆ ಮಂಗಳೂರು ಕಂಬಳದಲ್ಲಿ ವ್ಯಕ್ತಿಯೊರ್ವರು ಸಾರ್ವಜನಿಕವಾಗಿ ಅವಹೇಳನ ಮಾಡಿರುವುದು ಖಂಡನೀಯ. ಕಡಂಬರ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಅವಮಾನ ಮಾಡಿದ ವ್ಯಕ್ತಿ ತಕ್ಷಣವೇ ಕ್ಷಮೆ ಯಾಚಿಸಬೇಕು ಮತ್ತು ಆತನನ್ನು ಕಂಬಳ ಕೂಟದಿಂದ ಬಹಿಷ್ಕರಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಗ್ರಹಿಸಿದ್ದಾರೆ.

ಕಂಬಳ‌ ಕ್ಷೇತ್ರಕ್ಕೆ ಗುಣಪಾಲ ಕಡಂಬರ ಕೊಡುಗೆ ಅಪಾರ. ಅವರು ಕಂಬಳಕ್ಕಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ಶ್ರೇಷ್ಠ ವ್ಯಕ್ತಿ. ಅವರ ಗಟ್ಟಿ ನಿರ್ಧಾರಗಳಿಂದ ಕಂಬಳದಲ್ಲಿ ಶಿಸ್ತು ಪಾಲನೆಯಾಗುತ್ತಿದೆ. ಕಂಬಳದ ಬೆಳವಣಿಗೆಗೆ ಅಕಾಡೆಮಿಯನ್ನು ಪ್ರಾರಂಭಿಸಿ‌ ಅನೇಕ‌ ಉದಯೋನ್ಮುಖ ಓಟಗಾರು ಮತ್ತು ಪರಿಚಾರಕರು ಬೆಳೆಯಲು ಕಾರಣರಾದ ಅವರು ಅನೇಕ ಹೊಸ ಕಂಬಳಗಳ ಪ್ರಾರಂಭಕ್ಕೂ ಕಾರಣಕರ್ತರಾಗಿದ್ದಾರೆ.

ಕಂಬಳದಲ್ಲಿ ಗುಣಪಾಲ ಕಡಂಬರ ಧ್ವನಿಯೇ ಒಂದು ವಿಶೇಷ ಆಕರ್ಷಣೆ. ಅವರ ಧ್ವನಿಯಲ್ಲಿ ಕಂಬಳದ ಇತಿಹಾಸವನ್ನು ಕೇಳಲು ಸಾವಿರಾರು ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ. ಅಂತಹ ವ್ಯಕ್ತಿಯ ಧ್ವನಿ ಅಡಗಿಸಲು‌ ಯಾರಿಂದಲೂ ಸಾದ್ಯವಿಲ್ಲ. ಕಡಂಬರ ಜೊತೆ ಲಕ್ಷಾಂತರ ಕಂಬಳ ಅಭಿಮಾನಿಗಳು ಇದ್ದೇವೆ. ಅವಮಾನ ಮಾಡಿದ ವ್ಯಕ್ತಿಯನ್ನು ಕಂಬಳ ಕೂಟಕ್ಕೆ ಬಹಿಷ್ಕರಿಸಬೇಕು ಎಂದು ಶುಭದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.









































error: Content is protected !!
Scroll to Top