ಮೌಢ್ಯ : ಫೆ. 2ರವರೆಗೆ ಶುಭಕಾರ್ಯಗಳಿಗೆ ತಡೆ – ವ್ಯವಹಾರದ ಮೇಲೆ ಬರೆ

ಕಾರ್ಕಳ : ಹಿಂದು ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಮೌಢ್ಯದ ಅವಧಿಯಲ್ಲಿ ಯಾವುದೇ ಶುಭಕಾರ್ಯ ನಡೆಯುವುದಿಲ್ಲ. ಮೌಢ್ಯದ ಸಂದರ್ಭ ನಡೆಯುವ ಶುಭಕಾರ್ಯಗಳಿಗೆ ಶುಕ್ರನ ಅನುಗ್ರಹ ಇರುವುದಿಲ್ಲ, ಗ್ರಹಗಳ ಶಕ್ತಿ ಕ್ಷೀಣಿಸಿರುವುದರಿಂದ ಕಾರ್ಯಗಳು ಫಲ ಕೊಡುವುದಿಲ್ಲ ಎಂಬ ಬಲವಾದ ನಂಬಿಕೆ ಇದೆ. ಹೀಗಾಗಿ ಮುಂದಿನ 42 ದಿನಗಳ ಕಾಲ ಅಂದರೆ 2026 ಫೆ. 2ವರೆಗೆ ಶುಭಾಕಾರ್ಯಗಳು ವಿರಳವಿದ್ದು, ಗೌಜಿ ಗದ್ದಲಕ್ಕೆ ವಿರಾಮವಿರಲಿದೆ.

2025ರ ವರ್ಷದ 365 ದಿನಗಳ ಪೈಕಿ ವಿವಾಹ ಯೋಗ್ಯ ಶಾಸ್ತ್ರೋಕ್ತ ದಿನಗಳು 86 ದಿನಗಳು ಮಾತ್ರ ಇತ್ತು. 2025ರ ಡಿ. 16ರಿಂದ 2026ರ ಫೆ. 2ರವರೆಗಿನ ಕಾಲ ಮೌಢ್ಯ ಇರುವುದರಿಂದ ವಿವಾಹಾದಿ ಶುಭ ಕಾರ್ಯಗಳಿಗೆ ಶಾಸ್ತ್ರೋಕ್ತ ನಿಷೇಧವಿದೆ. ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ, ಉಪನಯನ ಹೊಸ ಅಂಗಡಿ, ಮಳಿಗೆ ಶುಭಾರಂಭ, ಜಾಗದ ವ್ಯವಹಾರ ಸ್ಥಗಿತಗೊಳ್ಳುತ್ತದೆ.

ವ್ಯವಹಾರದ ಮೇಲೂ ಬರೆ
ಮೌಢ್ಯದ ಪರಿಣಾಮ ವಿವಾಹಾದಿ ಶುಭಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಮದುವೆ ಸಭಾಂಗಣಗಳು, ಕ್ಯಾಟರಿಂಗ್, ಲೈಟಿಂಗ್, ಛಾಯಾಗ್ರಾಹಕರು, ವಾಹನಗಳು, ಡೆಕೋರೇಟರ್ಸ್, ಬಟ್ಟೆ-ಚಿನ್ನಾಭರಣ, ತರಕಾರಿ, ಕೋಳಿ, ದಿನಸಿ ಅಂಗಡಿ ಸೇರಿದಂತೆ ಅನೇಕ ವಾಣಿಜ್ಯ ವ್ಯವಹಾರಗಳ ಮೇಲೆ ಭಾರೀ ಪ್ರಭಾವ ಬೀರಲಿದೆ.





























































































error: Content is protected !!
Scroll to Top