ಕಾರ್ಕಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ – ಸ್ಕಿಲ್ ಅ್ಯಟ್ ಸ್ಕೂಲ್

ಕಾರ್ಕಳ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಸರಕಾರಿ ಪ್ರೌಢಶಾLa ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಕಲಿಕೆಗೆ ಸ್ಕಿಲ್ ಅ್ಯಟ್ ಸ್ಕೂಲ್ ಕಾರ್ಯಕ್ರಮದಡಿ ಅಟೋಮೊಬೈಲ್ ಮೆಂಟೇನೆನ್ಸ್ ರಿಪೇರ್ 300 ಗಂಟೆಗಳ ಅವಧಿಯ ವಿಶೇಷ ತರಬೇತಿಗೆ ಕಾರ್ಕಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಮೂಲಕ ತಾಲೂಕಿನಲ್ಲಿ ಆಯ್ಕೆಗೊಂಡ 2 ಪ್ರೌಢಶಾಲೆಗಳಾದ ಪೆರ್ವಾಜೆ ಸುಂದರ ಪುರಾಣಿಕ್ ಸರಕಾರಿ ಪ್ರೌಢ ಶಾಲೆ ಮತ್ತು ಸಾಣೂರಿನ ಸರಕಾರಿ ಪ್ರೌಢ ಶಾಲೆಯ 8 ಮತ್ತು 9ನೇ ತರಗತಿಯ ಒಟ್ಟು 60 ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನಗಳಂತೆ ಪ್ರತಿ ನಿತ್ಯ 2 ಗಂಟೆಗಳ ಕಾಲ ಆಯಾ ಶಾಲೆಗಳಲ್ಲಿ ಭೋದನೆ ಹಾಗೂ ಶನಿವಾರ 4 ಗಂಟೆಗಳ ಕಾಲ ಪ್ರಾಯೋಗಿಕ ತರಗತಿ ನಡೆಸಲಾಗುತ್ತಿದೆ.
ಇತ್ತೀಚೆಗೆ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿ ಗಿರಿಜಮ್ಮ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಗಿದ್ದು, ಈ ಸಂದರ್ಭ ಸುಂದರ ಪುರಾಣಿಕ್ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ದಿವಾಕರ್ ಹಾಗೂ ಸಿಬ್ಬಂದಿ ವರ್ಗ, ಸಾಣೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲವೀನಾ ಹಾಗೂ ಸಿಬ್ಬಂದಿ ವರ್ಗ, ಕಾರ್ಕಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಮಮತಾ ಎಲ್. ಎಸ್. ಹಾಗೂ ನೋಡಲ್ ಅಧಿಕಾರಿ ಸಂತೋಷ ನಾಯಕ್ ಬಿ. ಉಪಸ್ಥಿತರಿದ್ದರು.











































































error: Content is protected !!
Scroll to Top