ಚಾಲಕನಿಗೆ ಬಿಪಿ ಲೋ – ಬಸ್‌ ರಿಕ್ಷಾಕ್ಕೆ ಡಿಕ್ಕಿ

ಕಾರ್ಕಳ : ಚಾಲಕನಿಗೆ ಬಿಪಿ ಲೋ ಆಗಿ ಬಸ್‌ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ನ. 20ರಂದು ಕಾರ್ಕಳದಲ್ಲಿ ಸಂಭವಿಸಿದೆ. ಶ್ರೀ ಗಣೇಶ್‌ ಬಸ್‌ ಅನಂತಶಯನದಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದು ಕೆನರಾ ಬ್ಯಾಂಕ್‌ ಮುಂಭಾಗ ಚಾಲಕನಿಗೆ ಬಿಪಿ ಲೋ ಆಗಿದ್ದು ನಿಯಂತ್ರಣ ತಪ್ಪಿದ ಬಸ್‌ ತೀರಾ ಬಲಬದಿಗೆ ಬಂದು ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಿಕ್ಷಾ ಚಾಲಕ ಗಾಯಗೊಂಡಿದ್ದು ಗಾಯಾಳು ಮತ್ತು ಬಸ್‌ ಚಾಲಕನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.











































































error: Content is protected !!
Scroll to Top