ಉಡುಪಿ : ಈಜಲೆಂದು ಬೀಚ್‌ಗೆ ತೆರಳಿದ್ದ ಮೂವರು ನೀರುಪಾಲಾದ ಘಟನೆ ಕುಂದಾಪುರ ತಾಲೂಕು ಕಿರಿಮಂಜೇಶ್ವರದ ಹೊಸಹಿತ್ಲು ಎಂಬಲ್ಲಿ ಅ. 14ರಂದು ನಡೆದಿದೆ. ಸ್ಥಳೀಯರಾದ ಸಂಕೇತ್ (16), ಸೂರಜ್ (15), ಆಶೀಶ್ (14) ನೀರು ಪಾಲಾದ ಬಾಲಕರು. ಅವರ ಮೃತದೇಹ ಪತ್ತೆಯಾಗಿದೆ. ಈಜಲು ನಾಲ್ವರು ಬಾಲಕರು ತೆರಳಿದ್ದು ಅವರಲ್ಲಿ ಓರ್ವ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಈಜಲು ಬೀಚ್‌ಗೆ ತೆರಳಿದ್ದ ಮೂವರು ಬಾಲಕರು ಸಮುದ್ರಪಾಲು





































