ವೇಶ್ಯಾವಾಟಿಕೆ ಅಡ್ಡೆಗೆ ದಾಳಿ – ನಾಲ್ವರ ಬಂಧನ

ಮೂಡುಬಿದಿರೆ : ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ಅ. 14ರಂದು ನಿಡ್ಡೋಡಿಯಲ್ಲಿ ನಡೆದಿದೆ. ಆರೋಪಿಗಳನ್ನು ನಿಡ್ಯೋಡಿಯ ಮಹೇಶ, ಕಟೀಲಿನ ಯಜ್ಞೇಶ್‌, ದಿಲೀಪ್‌ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಇಬ್ಬರು ಅಪ್ರಾಪ್ತ ಬಾಲಕಿಯರೊಂದಿಗೆ ನಾಲ್ಕು ಮಂದಿ ಯುವಕರ ತಂಡವೊಂದು ನಿಡ್ಡೋಡಿಯ ಮನೆಯೊಂದರಲ್ಲಿದ್ದರೆನ್ನುವ ಮಾಹಿತಿ ತಿಳಿದ ಇನ್ಸೆಕ್ಟರ್‌ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಮಹೇಶನ ಮನೆಯಲ್ಲಿ ಅವನೊಬ್ಬನೇ ವಾಸವಿದ್ದುದರಿಂದ ಆ ಮನೆಯನ್ನು ಈ ಕೃತ್ಯಕ್ಕೆ ಉಪಯೋಗಿಸುತ್ತಿದ್ದರೆನ್ನಲಾಗಿದೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.































































































error: Content is protected !!
Scroll to Top