ಮೆಂತೆಯ ಆರೋಗ್ಯ ಲಾಭಗಳು

ಅಡುಗೆ ಮನೆಯಲ್ಲಿ ಬಳಸುವಂತಹ ಮೆಂತೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಇದಕ್ಕಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದದ ಪ್ರಕಾರ ಮೆಂತೆಯು ಲಘು ಗುಣವುಳ್ಳದ್ದು ಅಂದರೆ ಬೇಗನೆ ಜೀರ್ಣವಾಗುವಂತದ್ದು. ರುಚಿಯಲ್ಲಿ ಖಾರ ಹಾಗೂ ಕಹಿ ಇರುತ್ತದೆ. ವಾತ ಹಾಗೂ ಕಫ ದೋಷವನ್ನು ಶಮನಗೊಳಿಸುತ್ತದೆ. ಪಿತ್ತ ದೋಷವನ್ನು ಉಲ್ಬಣಗೊಳಿಸುತ್ತದೆ. ಉಷ್ಣ ವೀರ್ಯ ಸ್ವಭಾವ ಹೊಂದಿದೆ.
ಸಂಸ್ಕೃತದಲ್ಲಿ ಮೆಂತೆಯನ್ನು ಮೇಥಿಕ, ವಲ್ಲರಿ, ಚಂದ್ರಿಕಾ ಹೀಗೆ ಅನೇಕ ಹೆಸರಿಂದ ಕರೆಯುತ್ತಾರೆ.

ಮೆಂತೆಯ ಆರೋಗ್ಯ ಲಾಭಗಳು
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಮೈಕೈ ನೋವನ್ನು ನಿವಾರಿಸುತ್ತದೆ.
ಸಕ್ಕರೆ ಕಾಯಿಲೆ ಇದ್ದವರಿಗೆ ಒಳ್ಳೆಯದು.
ಗಂಟು ನೋವನ್ನು ಕಡಿಮೆಗೊಳಿಸುತ್ತದೆ.
ಕೊಲೆಸ್ಟ್ರಾಲ್ ಅನ್ನು ಕಮ್ಮಿ ಮಾಡುತ್ತದೆ.
ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು.
ಮಲಬದ್ಧತೆಯನ್ನು ದೂರ ಮಾಡುತ್ತದೆ.
ಕೂದಲಿನ ರಕ್ಷಣೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಡ್ಯಾಂಡ್ರಫ್, ಕೂದಲು ಉದುರುವುದು, ಕೂದಲಿನ ಬೆಳವಣಿಗೆಗೆ ಒಳ್ಳೆಯದು. ಮೆಂತೆ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಹಾಗೂ ಕಂಡೀಷನರ್ ಕೆಲಸ ಮಾಡುತ್ತದೆ.
ಜ್ವರದ ತಾಪವನ್ನು ಕಡಿಮೆಗೊಳಿಸುತ್ತದೆ.
ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ.
ಬಾಯಿ ರುಚಿಯನ್ನು ಸುಧಾರಿಸುತ್ತದೆ.
ಮಹಿಳೆಯರಿಗೆ ಹಾರ್ಮೋನ್ ತೊಂದರೆಗಳಲ್ಲಿ ಇದನ್ನು ಬಳಸಿದರೆ ಉತ್ತಮ.

ಒಂದು ಚಮಚ ಮೆಂತೆಯನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ನೆನೆ ಹಾಕಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು. ಮೆಂತೆಯನ್ನು ಅಡುಗೆಗಳಲ್ಲಿ ಬಳಸಿ. ಮೆಂತೆಯ ಚಟ್ನಿ, ಚಟ್ನಿ ಪುಡಿ, ಸಾರು, ಸಾಂಬಾರು, ದೋಸೆ ಹಿಟ್ಟು, ಇಡ್ಲಿ ಹಿಟ್ಟಿನಲ್ಲಿ ಬಳಸಿ. ಒಗ್ಗರಣೆಯಲ್ಲಿ ಮೆಂತೆಯನ್ನು ಬಳಸಿ ತಿಂಡಿಯನ್ನು ತಯಾರಿಸಿ. ಮೆಂತೆ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಬೆಲ್ಲ ಹಾಕಿ ಮೆಂತೆ ಕಾಫಿ ಕೂಡ ಮಾಡಬಹುದು. ಮೆಂತೆ ಹಿಟ್ಟಿನಿಂದ ಅದರ ಉಂಡೆಗಳನ್ನು ಮಾಡಿ ಸೇವಿಸಬಹುದು. ಆದರೆ, ಮೆಂತೆಯ ವಿಪರೀತ ಸೇವನೆ ಒಳ್ಳೆಯದಲ್ಲ.









error: Content is protected !!
Scroll to Top