ತೆಂಗು ಮರ ಹತ್ತುವ ಕಾರ್ಮಿಕರಿಗಾಗಿ ಕೇರಾ ಸುರಕ್ಷಾ ವಿಮಾ ಯೋಜನೆ

ಕಾರ್ಕಳ : ತೆಂಗು ಅಭಿವೃದ್ಧಿ ಮಂಡಳಿಯು M/s ದಿ ನ್ಯೂ ಇಂಡಿಯಾ ಅನುರೆನ್ಸ್ ಕಂ ಲಿ ಸಹಯೋಗದೊಂದಿಗೆ ಜಾರಿಗೆ ತಂದಿರುವ ಕೇರಾ ಸುರಕ್ಷಾ ವಿಮಾ ಯೋಜನೆಯಡಿಯಲ್ಲಿ ತೆಂಗಿನ ಮರ ಹತ್ತುವವರಿಗೆ/ನೀರಾ ತಂತ್ರಜ್ಞರಿಗೆ, ತೆಂಗು ಕೊಯ್ದು ಮಾಡುವವರಿಗೆ ಗರಿಷ್ಠ ಏಳು ಲಕ್ಷ ರೂ. ಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.

ಪ್ರಸ್ತುತ ಫಲಾನುಭವಿಯ ವಾರ್ಷಿಕ ಪ್ರೀಮಿಯಂ ಪಾಲು ರೂ. 143/- ಆಗಿದ್ದು, ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವವರು ಅರ್ಜಿ ಹಾಗೂ ಆಧಾರ್ ಪ್ರತಿಯೊಂದಿಗೆ ಮತ್ತು ಪ್ರಮಾಣೀಕರಣದೊಂದಿಗೆ ಅರ್ಜಿಗಳನ್ನು ತೆಂಗು ಅಭಿವೃದ್ಧಿ ಮಂಡಳಿ, ಕೇರಾ ಭವನ, ಎಸ್. ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ-682011, ಕೇರಳಕ್ಕೆ ಸಲ್ಲಿಸಬಹುದು.

ಕೇರಾ ಸುರಕ್ಷಾ ವಿಮಾ ಯೋಜನೆಯು ಸಾಮಾನ್ಯ ಅಪಘಾತ ವಿಮಾ ಯೋಜನೆಯಾಗಿದ್ದು, ಕೆಲಸ ನಿರ್ವಹಿಸುವ ಸಮಯದಲ್ಲಿ ಮಾತ್ರವಲ್ಲದೆ ಬೇರೆ ಸಂದರ್ಭಗಳಲ್ಲಿ ಸಂಭವಿಸುವ ಅಪಘಾತಗಳನ್ನು ಒಳಗೊಂಡಿದೆ. ವಿಮಾದಾರರು ಮರಣ ಹೊಂದಿದಲ್ಲಿ ಅಥವಾ ಶಾಶ್ವತ ಪೂರ್ಣ ಅಂಗವಿಕಲರಾದಲ್ಲಿ ರೂ. 7.00 ಲಕ್ಷ, ಶಾಶ್ವತ ಭಾಗಶಃ ಅಂಗವಿಕಲರಾದ ರೂ. 3.50 ಲಕ್ಷ, ಆಸ್ಪತ್ರೆಗೆ ದಾಖಲಾದಲ್ಲಿ ಔಷಧಿ ವೆಚ್ಚ ಸೇರಿದಂತೆ ವೈದ್ಯಕೀಯ ವೆಚ್ಚ ಗರಿಷ್ಠ ರೂ. 2.00 ಲಕ್ಷ, ಆಂಬುಲೆನ್ಸ್ ವೆಚ್ಚ ರೂ. 3500/-, 6 ತಿಂಗಳ ನಿರ್ವಹಣಾ ವೆಚ್ಚ ರೂ. 21000/-, ಆಸ್ಪತ್ರೆಗೆ ದಾಖಲಾದ ಸಂಧರ್ಭಗಳಲ್ಲಿ ಸಹಚರರಿಗೆ ಗರಿಷ್ಠ ರೂ. 3000/-, ಮರಣ ಸಂಧರ್ಭದಲ್ಲಿ ಶವ ಸಂಸ್ಕಾರಕ್ಕಾಗಿ ರೂ. 5500/- ಗಳಿಗೆ ವಿಮೆ ರಕ್ಷಣೆ ಹೊಂದಿರುತ್ತಾರೆ.
ಅಪಘಾತ ಸಂಭವಿಸಿದ ಸಂಧರ್ಭದಲ್ಲಿ ವಿಮಾದಾರರು 72 ಗಂಟೆಗಳ ಒಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಾಥಮಿಕ ಮಾಹಿತಿಯನ್ನು ನೀಡಬೇಕು.

ಅರ್ಜಿ ನಮೂನೆಯನ್ನು ತೋಟಗಾರಿಕೆ ಇಲಾಖೆ, ಗ್ರಾಮ ಪಂಚಾಯತ್ ಅಥವಾ ಕೃಷಿ ಸಖಿಯರಿಂದ ಪಡೆದು ಪಂಚಾಯತ್ ಅಧ್ಯಕ್ಷರು/CPF ಪದಾಧಿಕಾರಿಗಳು/CPC ನಿರ್ದೇಶಕರುಗಳಿಂದ ಮೇಲುರುಜು ಮಾಡಿದ ಜೊತೆಗೆ ತೆಂಗು ಅಭಿವೃದ್ಧಿ ಮಂಡಳಿ ಪರವಾಗಿ ಎರ್ನಾಕುಲಂನಲ್ಲಿ ಪಾವತಿಸುವಂತೆ ರೂ. 143/- ರ ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೋನ್ ಪೇ ಅಥವಾ ಗೂಗಲ್ ಪೇ ಅಥವಾ ನೆಪ್ಟ್ ಮತ್ತು ವಯಸ್ಸಿನ ಪುರಾವೆಗಾಗಿ ಆಧಾರ್ ಪ್ರತಿಯೊಂದಿಗೆ ತೆಂಗು ಅಭಿವೃದ್ಧಿ ಮಂಡಳಿ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ-682011, ಕೇರಳಕ್ಕೆ ಕಳುಹಿಸಬಹುದು, ಅರ್ಜಿ ಮತ್ತು ಇತರೆ ವಿವರಗಳು ತೆಂಗು ಅಭಿವೃದ್ಧಿ ಮಂಡಳಿಯ ಜಾಲತಾಣ http://www.coconutboard.gov.in ನಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ತೋಟಗಾರಿಕೆ ಇಲಾಖೆ ಅಥವಾ ತೆಂಗು ಅಭಿವೃದ್ಧಿ ಮಂಡಳಿ, ಕೊಚ್ಚಿಯ ಅಂಕಿ ಅಂಶ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.









error: Content is protected !!
Scroll to Top