ನೆಲ್ಲಿಕಾರು ಶಾಲಾ ಮುಖ್ಯ ಶಿಕ್ಷಕ ಹರೀಶ ಕೆ. ಎಂ. ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಕಾರ್ಕಳ : ನೆಲ್ಲಿಕಾರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ್‌ ಕೆ. ಎಂ. ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಾಲೆ ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿರುವ ಹರೀಶ್‌ ಅವರು ಷೋಷಕರ ಹಾಗೂ ಊರವರ ಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿರುತ್ತಾರೆ.

ಶಿಕ್ಷಣ
ಕಾಸರಗೋಡು ನೀರ್ಚಾಲುವಿನಲ್ಲಿ ಪ್ರಾಥಮಿಕ, ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿಯಲ್ಲಿ ಹಿರಿಯ ಪ್ರಾಥಮಿಕ, ಕಾರ್ಕಳ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ , ಹೆಬ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ, ಮಂಗಳೂರು ಕೊಡಿಯಾಲ್‌ಬೈಲು ಕಾಲೇಜಿನಲ್ಲಿ (TCH) ತರಬೇತಿ ಪಡೆದಿರುತ್ತಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಮೈಸೂರುನಿಂದ ಬಿಎ ಹಾಗೂ ಕುವೆಂಪು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (MA) ಪಡೆದಿರುತ್ತಾರೆ.

1993ರಲ್ಲಿ ಜೋಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಸೇರ್ಪಡೆಗೊಂಡರು. ಬಳಿಕ, ಮುಳಿಬೆಟ್ಟು ಇರುವೈಲು, ಮಿಜಾರು, ಮಳಲಿ, ಮೂಡುಬಿದಿರೆ ಕೊಪ್ಪದಕುಮೇರು ಮೂಡುಬಿದ್ರೆ, ಕಲ್ಲಬೆಟ್ಟು ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು. 2022 ರಿಂದ ನೆಲ್ಲಿಕಾರು ಶಾಲಾ ಮುಖ್ಯಶಿಕ್ಷಕರಾಗಿ ಭಡ್ತಿಗೊಂಡರು.

















































error: Content is protected !!
Scroll to Top