ಬುರುಡೆ ಕೇಸ್‌ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ ಕೈವಾಡ : ಯಶ್‌ಪಾಲ್‌ ಸುವರ್ಣ ಆರೋಪ

ಮಂಗಳೂರು : ಧರ್ಮಸ್ಥಳದ ಬುರುಡೆ ಪ್ರಕರಣ ಅನಾಮಿಕನ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ ಎಂದು ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ ಆರೋಪ ಮಾಡಿದ್ದಾರೆ.
ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಷಡ್ಯಂತ್ರ ಮಾಡಿದವರ ಮೂಲಕ್ಕೆ ಹೋಗಬೇಕು. ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಸಂಗತಿ ಬಯಲಾಗಲಿದೆ ಎಂದು ಹೇಳಿದರು.

ಅಂದು ಬ್ರಿಟಿಷರು ಬಂದು ಹಿಂದೂಗಳನ್ನು ಒಡೆದು ಆಳಿದ್ದರು. ಈಗ ಕಮ್ಯೂನಿಸ್ಟರು ಹಿಂದೂ ಸಮಾಜದ ಒಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದಬ್ಬಾಳಿಕೆ ಮಾಡಿ ಹಿಂದೂಗಳನ್ನು ಒಡೆಯಲು ಮುಂದಾಗುತ್ತಿದ್ದಾರೆ. ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಗೃಹ ಸಚಿವರು ಸದನದಲ್ಲಿ ರಾಜಕೀಯವನ್ನು ಬಿಟ್ಟು ಸರಿಯಾದ ಉತ್ತರ ನೀಡಲಿ. ಧರ್ಮದ ವಿರುದ್ಧದ ಅವಹೇಳನ, ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ. ಮಂಜುನಾಥ ಸ್ವಾಮಿ ಎಲ್ಲಾ ಷಡ್ಯತ್ರಗಳಿಗೆ ಉತ್ತರ ಕೊಡುತ್ತಾನೆ ಎಂದು ಹೇಳಿದರು.























































error: Content is protected !!
Scroll to Top