ಕೆಎಸ್​ಆರ್​ಟಿಸಿ ಬಸ್‌ನಲ್ಲಿ ಹೊಸ ಲಗೇಜ್ ನಿಯಮ

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್​ಆರ್​ಟಿಸಿ) ನೂತನ ಲಗೇಜ್ ರೂಲ್ಸ್ ಬಿಡುಗಡೆ ಮಾಡಿದೆ. ಕೆಎಸ್​ಆರ್​ಟಿಸಿ ಬಸ್‌ನಲ್ಲಿ ದಿನನಿತ್ಯ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಈಗ ಪ್ರಯಾಣಿಕರು ಬಸ್‌ನಲ್ಲಿ ತಮ್ಮ ವೈಯಕ್ತಿಕ ಲಗೇಜ್ ಮಾತ್ರವಲ್ಲದೆ, ಫ್ರಿಡ್ಜ್, ವಾಷಿಂಗ್ ಮಿಷಿನ್, ಕಬ್ಬಿಣದ ಪೈಪ್‌ಗಳು, ಟೈರ್‌ಗಳು, ಮತ್ತು ಪ್ರಾಣಿ-ಪಕ್ಷಿಗಳನ್ನೂ ಸಾಗಿಸಲು ಅವಕಾಶವನ್ನು ನೀಡಲಾಗಿದೆ. ಈ ಹೊಸ ನಿಯಮಗಳು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ಜೊತೆಗೆ, ಸಾರಿಗೆ ನಿಗಮಕ್ಕೆ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

ಕೆಎಸ್‌ಆರ್‌ಟಿಸಿಯ ಹೊಸ ನಿಯಮಗಳ ಪ್ರಕಾರ, ಪ್ರತಿ ವಯಸ್ಕ ಪ್ರಯಾಣಿಕನಿಗೆ 30 ಕೆ.ಜಿ. ಮತ್ತು ಮಕ್ಕಳಿಗೆ 15 ಕೆ.ಜಿ. ತೂಕದ ವೈಯಕ್ತಿಕ ಲಗೇಜ್‌ಗೆ ಯಾವುದೇ ಶುಲ್ಕವಿಲ್ಲದೆ ಸಾಗಿಸಲು ಅವಕಾಶವಿದೆ. ಈ ಉಚಿತ ಲಗೇಜ್‌ನಲ್ಲಿ ಬಟ್ಟೆ, ಪುಸ್ತಕಗಳು, ಪ್ರಯಾಣಕ್ಕೆ ಅಗತ್ಯವಾದ ಆಹಾರ, ಮತ್ತು ಇತರ ವೈಯಕ್ತಿಕ ವಸ್ತುಗಳು ಸೇರಿವೆ. ಆದರೆ, 30 ಕೆ.ಜಿ.ಗಿಂತ ಹೆಚ್ಚಿನ ತೂಕದ ಲಗೇಜ್‌ಗೆ, ವಾಣಿಜ್ಯ ವಸ್ತುಗಳಿಗೆ ಮತ್ತು ಭಾರೀ ವಸ್ತುಗಳಾದ ಫ್ರಿಡ್ಜ್, ವಾಷಿಂಗ್ ಮಿಷಿನ್, ಟೈರ್‌ಗಳು, ಕಬ್ಬಿಣದ ಪೈಪ್‌ಗಳು, ಅಲ್ಯೂಮಿನಿಯಂ ಪೈಪ್‌ಗಳು ಮತ್ತು ಖಾಲಿ ಕಂಟೈನರ್‌ಗಳಿಗೆ ಶುಲ್ಕವನ್ನು ವಿಧಿಸಲಾಗುತ್ತದೆ.

a href="#" target="_blank">







































error: Content is protected !!
Scroll to Top