ಕಾರ್ಕಳ : ವ್ಯಕ್ತಿಯೋರ್ವರು ಆನ್‌ಲೈನ್‌ನಲ್ಲಿ 15.52 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶ್ವಿತ್ ಎಂಬವರ ವಾಟ್ಸಾಪ್‌ಗೆ 2025ರ ಜ. 28ರಂದು ಮೀನಾ ಸಕ್ಪಾಲ್ ಎಂಬವರು 918433053932 ನಂಬರ್‌ನಿಂದ ಮೆಸೆಜ್ ಮಾಡಿ ಟೆಲಿಗ್ರಾಫ್ ಆ್ಯಪ್‌ನಲ್ಲಿ S-Coin Investemnet taskಗೆ Join ಆಗುವಂತೆ ಹೇಳಿರುತ್ತಾರೆ. ಅದರಂತೆ ಅಶ್ವಿತ್ ಆ್ಯಪ್‌ಗೆ ಜಾಯಿನ್ ಆಗಿ ಅಕೌಂಟ್ ಡಿಟೇಲ್ಸ್ ಕಳುಹಿಸಿರುತ್ತಾರೆ. ಈ ಟಾಸ್ಕ್‌ಗೆ ಹಣ ಹಾಕಿದರೆ ಹೆಚ್ಚು ಕಮಿಷನ್ ನೀಡುವುದಾಗಿ ಹೇಳಿದ್ದು ಅಂತೆಯೇ ಅಶ್ವಿತ್ ತಮ್ಮ ಬ್ಯಾಂಕ್ ಖಾತೆಯಿಂದ ಜ. 29ರಿಂದ ಫೆ. 19ರವರೆಗೆ S-Coin Investemnetಗೆ ಸಂಬಂಧಿಸಿದ UPIಗೆ ಒಟ್ಟು 15,52,650 ರೂ. ಹಣ ಹಾಕಿರುತ್ತಾರೆ. ಇನ್ನೂ ಹೆಚ್ಚಿನ ಹಣ ಹಾಕುವಂತೆ ಅಶ್ವಿತ್‌ಗೆ ತಿಳಿಸಿದಾಗ ಹಣ ಇಲ್ಲ ಹಾಕಿದ ಹಣವನ್ನು ವಾಪಾಸು ನೀಡುವಂತೆ ಕೇಳಿದ್ದಾರೆ. ಅದಕ್ಕೆ ಟ್ಯಾಕ್ಸ್ ಪೇಮೆಂಟ್ ಮಾಡಬೇಕು ಎಂದು ಹೇಳಿ ಕಟ್ಟಿದ ಹಣವನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂದು ಅಶ್ವಿತ್ ದೂರಿನಲ್ಲಿ ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ಟಾಸ್ಕ್ ನೀಡಿ ಕಮಿಷನ್ ಆಮಿಷ – ವ್ಯಕ್ತಿಗೆ 15.52 ಲಕ್ಷ ರೂ. ವಂಚನೆ



















