ಕಡಾರಿ – ಸರ್ವೋದಯ ಮಹಿಳಾ ಮಂಡಳಿ ವತಿಯಿಂದ ಆಟಿದ ಲೇಸ್‌ – ಸನ್ಮಾನ

ಕಾರ್ಕಳ : ಸರ್ವೋದಯ ಮಹಿಳಾ ಮಂಡಳಿಯ ಆಶ್ರಯದಲ್ಲಿ ಸರ್ವೋದಯ ಯುವಕ ಮಂಡಳದ ಸಹಕಾರದೊಂದಿಗೆ ಕಡಾರಿ ಮಹಾಲಕ್ಷ್ಮೀ ಭಜನಾ ಮಂಡಳಿ ಆವರಣದಲ್ಲಿ ಎರಡನೆ ವರ್ಷದ ಆಟಿದ ಲೇಸ್ ಜರುಗಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ವೋದಯ ಮ‌ಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ಹೆಗ್ಡೆ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ಆಚರಣೆ, ಸಂಸ್ಕೃತಿ, ಪರಂಪರೆ, ಸಂಪ್ರದಾಯ ಮುಂದುವರಿಸಿಕೊಂಡು ಹೋಗುವ ಗುರುತರ ಹೊಣೆ ನಮ್ಮ ಮೇಲಿದೆ. ಇಂತಹ ಆಚರಣೆಗಳನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಕಾರ್ಯವಾಗಬೇಕೆಂದರು.
ಯುವಕ ಮಂಡಳದ ಅಧ್ಯಕ್ಷ ಸದಾನಂದ ಕೋಟ್ಯಾನ್, ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

40 ಬಗೆಯ ತಿಂಡಿ ತಿನಿಸು
ಆಟಿದ ಲೆಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚಿನ ಬಗೆಯ ಆಟಿ ತಿನಿಸುಗಳಿತ್ತು. ಸ್ಥಳೀಯ ಮಹಿಳೆಯರು ಮನೆಯಲ್ಲಿ ತಯಾರಿಸಿದ ಬಗೆ ಬಗೆಯ, ರುಚಿ ರುಚಿಯ ತಿಂಡಿ ತಿನಿಸು ತಂದಿದ್ದರು. ಇದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಸನ್ಮಾನ
ಹಿರಿಯರಾಗಿರುವ ರಾಜೀವಿ ಹೆಗ್ಗಡ್ತಿ ಕಜಕಲಬೆಟ್ಟು ಹಾಗೂ ತುಳುನಾಡ ವಿಶೇಷ ಪಾರ್ದನ ಹಾಡಿದ, ಕೃಷಿ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಚಿಂದು ಅವರನ್ನು ಗೌರವಿಸಲಾಯಿತು. ಮಹಿಳಾ ಮಂಡಳಿ ಹಾಗೂ ಯುವಕ ಮಂಡಳದ ಗೌರವಾಧ್ಯಕ್ಷ ಅಶೋಕ್ ನಾಯ್ಕ್, ಮಾಲತಿ ನಾಯ್ಕ್, ವಿನಯಾ ಡಿ. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂದನ ಸ್ವಾಗತಿಸಿ , ಶುಭಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಹರಿಣಿ ವಂದಿಸಿದರು.







































error: Content is protected !!
Scroll to Top